

ಸರಗೂರು: ಶಾಸಕ ಅನಿಲ್ ಚಿಕ್ಕಮಾದು ಅವರ ಜನ್ಮ ದಿನಾಚರಣೆ ಅಂಗವಾಗಿ ತಾಲೂಕಿನ ಬಂಕವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸರಗೂರು ಸಾಮಾಜಿಕ ಜಾಲತಾಣ ವತಿಯಿಂದ ಪುಸ್ತಕ ವಿತರಣೆ ಮಾಡಲಾಯಿತು.
ಸಾಮಾಜಿಕ ಜಾಲತಾಣ ಅಧ್ಯಕ್ಷ ಶಿವಲಿಂಗಯ್ಯ ಅವರ ನೇತೃತ್ವದಲ್ಲಿ ಶಾಲಾ ಆವರಣದಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಲಾ ಯಿತು. ನಿಂಬೆ, ನುಗ್ಗೆ, ಕರಿಬೇವು, ಸೀಬೆ, ಹಲಸು, ಮಾವು, ಬಾಳೆ, ಬೆಟ್ಟದ ನೆಲ್ಲಿ, ಔಷಧೀಯ ಗುಣಗಳಿರುವ 50 ಕ್ಕೂ ಹೆಚ್ಚು ವಿವಿಧ ಹಣ್ಣಿನ ಗಿಡಹಾಗೂ ತರಕಾರಿ ಬಿತ್ತನೆ ಬೀಜಗಳನ್ನು ವಿತರಿಸಲಾಯಿತು.
ನಂತರ ಮಕ್ಕಳು ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಚಿಕ್ಕಸ್ವಾಮಿ, ಪದ್ಮರಾಜ್, ಸುರೇಶ್, ಸುಂದರ್‌ದಾಸ್, ರೇಖಾಕುಮಾರ್, ಇಂದ್ರಕುಮಾರ್, ಸೋಮಯ್ಯ, ದೇವಯ್ಯ, ಸುರೇಂದ್ರ, ಮಹೇಶ್, ಸಾಮಾಜಿಕ ಜಾಲತಾಣದ ಲೋಕೇಶ್ ಮುಳ್ಳೂರು, ಮಣಿಕಂಠ, ಮೋಹನ್ ಕುಮಾರ್, ಸೂರ್ಯಕುಮಾರ್ ಇತರರು ಹಾಜರಿದ್ದರು.