ಪುರಸಭೆ ಮುಂದೆ ಮುಂದುವರಿದ ಏಕಾಂಗಿ ಪ್ರತಿಭಟನೆ

13HDK3
Published on

ಎಚ್.ಡಿ.ಕೋಟೆ: ಪುರಸಭೆಯಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಗೆ ವಿಳಂಬ ಧೋರಣೆ ಖಂಡಿಸಿ, ಸದಸ್ಯ ಮಿಲ್ ನಾಗರಾಜು ಪುರಸಭೆ ಕಚೇರಿ ಮುಂದೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿತು.


ಕಂದಾಯ ಇಲಾಖೆ ಜಾಗಗಳನ್ನು ಸರ್ಕಾರದ ನಿಯಮ ಉಲ್ಲಂಘಿಸಿ ಖಾತೆ ಹಾಗೂ ಇ-ಸ್ವತ್ತು ಮಾಡಿದ್ದಾರೆ. 2016-17ನೇ ಸಾಲಿನಿಂದ ಇಲ್ಲಿಯವರೆಗೂ ಆಶ್ರಯ ಮನೆಗಳ ಬಿಲ್ ಪಾವತಿ ಮಾಡುವುದರಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕಂದಾಯ ವಸೂಲಾತಿಯಲ್ಲಿ ಅವ್ಯವಹಾರ ನಡೆಸಿ ದಾಖಲಾತಿಗಳನ್ನು ಮರೆಮಾಚಿದ್ದಾರೆ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿರುವ ತೀರ್ಮಾನಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಪೌರಾಡಳಿತ ಸಚಿವಾಲಯಕ್ಕೆ ತನಿಖೆ ಮಾಡಿ ಕ್ರಮ ವಹಿಸಲು ದೂರು ನೀಡಿ 9 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ತನಿಖೆಗೆ ಆದೇಶಿಸುವವರೆಗೂ ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಸೋಮವಾರದಿಂದ ಉಪವಾಸ ಕೈಗೊಂಡಿದ್ದಾರೆ.


ಮಂಗಳವಾರ ಸಿಪಿಎಂಎಲ್, ಆಮ್ ಆದ್ಮಿ ಪಕ್ಷ, ಬಹುಜನ ಸಮಾಜ ಪಾರ್ಟಿ, ತಾಲೂಕು ಭ್ರಷ್ಟಾಚಾರ ನಿರ್ಮೂಲನ ಹೋರಾಟ ಸಮಿತಿ, ತಾಲೂಕು ಭೀಮಾ ಸೇನಾ ಹಾಗೂ ಪಟ್ಟಣದ ನಾಗರಿಕರು ಉಪವಾಸ ಸತ್ಯಾಗ್ರಹ ಬೆಂಬಲ ವ್ಯಕ್ತಪಡಿಸಿದರು.


ಹೈರಿಗೆ ಶಿವರಾಜು, ಗೋವಿಂದೇಗೌಡ, ಚಾ.ಶಿವಕುಮಾರ್, ಕೆ.ಜಿ. ಹಳ್ಳಿ ಸಿದ್ದಪ್ಪಾಜಿ, ಗ್ರಾಮೀಣ ಮಹೇಶ್, ಮಹಾದೇವಸ್ವಾಮಿ, ಕೆಂಡಗಣ್ಣಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net