ಪಿರಿಯಾಪಟ್ಟಣ ಅಭಿವೃದ್ಧಿಗೆ ಮತ್ತೊಮ್ಮೆ ಅವಕಾಶ ನೀಡಿ

IMG20230426180651 - Copy
Published on

ಬೈಲಕುಪ್ಪೆ: ಈ ಭಾಗದ ಸುತ್ತಮುತ್ತ ಗ್ರಾಮಗಳ ರಸ್ತೆಗಳು ಹದಗೆಟ್ಟು ತಿರುಗಾಡಲು ಅಸಾಧ್ಯವಾಗಿದ್ದವು. ಜನರ ಬೇಡಿಕೆಯಂತೆ ಎಲ್ಲವನ್ನು ಪೂರೈಸಿದ್ದೇನೆ. ಮತ್ತೊಂದು ಬಾರಿ ನನಗೆ ಈ ತಾಲೂಕಿನ ಮುಂದಿನ ಅಭಿವೃದ್ಧಿಗೋಸ್ಕರ ಸಹಕರಿಸಬೇಕೆಂದು ಶಾಸಕ ಕೆ.ಮಹದೇವ್ ಬುಧುವಾರ ಮನವಿ ಮಾಡಿದರು.


ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮತಯಾಚನೆ ಭಾಗವಹಿಸಿ ಮಾತನಾಡಿ, ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿ ಎಲ್ಲ ಹಳ್ಳಿಗಳ ಅಭಿವೃದ್ಧಿ ಮಾಡಿರುವುದನ್ನು ವಿವರವಾಗಿ ತಿಳಿಸಿ, ಈ ಭಾಗದಲ್ಲಿ ಸಣ್ಣ ಕೈಗಾರಿಕೆ ಅಭಿವೃದ್ಧಿ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆಕೊಟ್ಟರು. ನಂತರ ಆವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.


ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಕೊಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ರೇಣುಕಾ ಸ್ವಾಮಿ, ಜೆಡಿಎಸ್ ಪಕ್ಷದ ಮುಖಂಡರಾದ ವಕೀಲ ಗೋವಿಂದಗೌಡ, ಪ್ರೀತಿ ಅರಸ್, ಚಂದ್ರಶೇಖರ್, ಗಿರೀಶ್, ಶಫಿವುಲ್ಲಾ ಖಾನ್, ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಸಿಂಧೂ, ರಾಮಚಂದ್ರ, ಸುರೇಶ್, ಹರಿಣಿ ಮತದಾರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net