

ಉತ್ತಮ ಪ್ರದರ್ಶನ ನೀಡಿದ ಮಾನಸಗಂಗೋತ್ರಿಯ ಪಿಜಿಎಸ್‌ಸಿ, ತಿ.ನರಸೀಪುರದ ಪಿಆರ್‌ಎಂ ವಿಜಯಾ ಪ್ರಥಮ ದರ್ಜೆ ಕಾಲೇಜು ತಂಡಗಳು ಕ್ರಮವಾಗಿ ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದ ಪುರುಷ ಹಾಗೂ ಮಹಿಳಾ ವಿಭಾಗದ ಚಾಂಪಿಯನ್ ಆಗಿ ಹೊರ ಹೊಮ್ಮಿದವು.
ನಗರದ ಓವೆಲ್ ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡ ಕೂಟದಲ್ಲಿ 68 ಪಾಯಿಂಟ್ ಕಲೆಹಾಕಿದ ಪಿಜಿಎಸ್‌ಸಿ ತಂಡಕ್ಕೆ ಪೈಪೋಟಿ ನೀಡಿದ ಯುವರಾಜ ಕಾಲೇಜು ತಂಡದವರು (65 ಪಾಯಿಂಟ್) ರನ್ನರ್ ಅಪ್ ಆದರು.
ಮಹಿಳಾ ವಿಭಾಗದಲ್ಲಿ ತಿ.ನರಸೀಪುರದ ಪಿಆರ್‌ಎಂ ವಿಜಯಾ ಪ್ರಥಮ ದರ್ಜೆ ಕಾಲೇಜು ತಂಡದವರು 71 ಅಂಕದೊಂದಿಗೆ ಚಾಂಪಿಯನ್ ಆಯಿತು. 70 ಅಂಕಗಳೊಂದಿಗೆ ಮೈಸೂರಿನ ಟೆರೇಷಿಯನ್ ಕಾಲೇಜು ತಂಡದವರು ದ್ವಿತೀಯ ಸ್ಥಾನ ಪಡೆದರು.
ಸಿದ್ಧಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆರ್.ಪ್ರಜ್ವಲ್ ಹಾಗೂ ವಿದ್ಯಾಶ್ರಮ ಕಾಲೇಜಿನ ದಿಶಾ ಗಣಪತಿ 2024-25ನೇ ಸಾಲಿನ ಉತ್ತಮ ಅಥ್ಲೀಟ್ ಆಗಿ ಹೊರ ಹೊಮ್ಮಿದರು.
ದಿಶಾ, ಲಿನ್ಯಾ ಮೇರಿ ದಾಖಲೆ: ಲಾಂಗ್‌ಜಂಪ್‌ನಲ್ಲಿ 5.31 ಮೀಟರ್ಸ್ ಜಿಗಿದ ವಿದ್ಯಾಶ್ರಮ ಕಾಲೇಜಿನ ದಿಶಾ ಗಣಪತಿ ಹಾಗೂ 5.30 ಮೀಟರ್ಸ್ ಜಿಗಿದ ಸಿದ್ಧಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲಿನ್ಯಾ ಮೇರಿ ಅವರು 1997-98ರಲ್ಲಿ ಟೆರೇಷಿಯನ್ ಕಾಲೇಜಿನ ಜೆ.ಜೆ.ಶಶಿಕಲಾ ಹೆಸರಿನಲ್ಲಿದ್ದ (5.28 ಮೀಟರ್ಸ್) ದಾಖಲೆಯನ್ನು ಮುರಿದರು. ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಮ್ರೀನ್ ಶೇಖ್ ಮೂರನೇ ಸ್ಥಾನ ಪಡೆದರು.
ಹಾಫ್ ಮ್ಯಾರಥಾನ್‌ನಲ್ಲಿ ಪಿಜಿಎಸ್‌ಸಿ ಮಾನಸಗಂಗೋತ್ರಿಯ ಆರ್.ಪುರುಷೋತ್ತಮ್ ಅವರು 1 ಗಂಟೆ 4 ನಿಮಿಷ 53.86 ಸೆಕೆಂಡ್‌ಗಳಲ್ಲಿ ಗೆಲುವಿನ ಗೆರೆ ದಾಟಿ, 1999ರಲ್ಲಿ ಬೇಲೂರು ಸರ್ಕಾರಿ ಕಾಲೇಜಿನ ಬಿ.ಎಲ್.ಗೋಪಾಲ್ ಹೆಸರಿನಲ್ಲಿದ್ದ ದಾಖಲೆಯನ್ನು (1 ಗಂಟೆ 10 ನಿಮಿಷ 6 ಸೆಕೆಂಡ್) ಮುರಿದರು. ತಿ.ನರಸೀಪುರ ವಿಜಯಾ ಕಾಲೇಜಿನ ದೊರೆಸ್ವಾಮಿ ಹಾಗೂ ಬನ್ನೂರು ಸರ್ಕಾರಿ ಕಾಲೇಜಿನ ಬಿ.ಎಂ.ವಿನಯ್ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.
ಪುರುಷರ ವಿಭಾಗ: 400 ಮೀಟರ್ಸ್ ಓಟ: 1.ಎನ್.ರಾಹುಲ್ ನಾಯಕ (ವಿದ್ಯಾಶ್ರಮ ಕಾಲೇಜು, ಕಾಲ; 50.53 ಸೆಕೆಂಡ್), 2. ಭರತ್ ಎಚ್.ಗಿರಿಗೌಡ (ಮಹಾಜನ ಕಾಲೇಜು), 3. ವಿನೀತ್ ಎ. ಕಶ್ಯಪ್ (ಜಿಎಫ್‌ಜಿಸಿ, ಸಿದ್ಧಾರ್ಥನಗರ)., ಲಾಂಗ್ ಜಂಪ್: 1. ರಾಜಶೇಖರ್ (ಯುವರಾಜ ಕಾಲೇಜು, ದೂರ: 5.5 ಮೀಟರ್ಸ್), 2. ಡಿ.ಟಿ.ಹೇಮಂತ್ (ಮಹಾರಾಜ ಕಾಲೇಜು), 3. ಯುವರಾಜ್ (ಯುವರಾಜ ಕಾಲೇಜು)., ಡೆಕಾಥ್ಲಾನ್: ಕೆ.ಜುಶಾಲ್ 1.(ಯುವರಾಜ ಕಾಲೇಜು, ಅಂಕ: 3,638), 2. ಎಂ.ಪಿ.ಪ್ರಜ್ವಲ್ (ಪಿಜಿಎಸ್‌ಸಿ), ಡಿ.ಎಸ್.ಭರತ್ (ಜಿಎಫ್‌ಜಿಸಿ, ನಂಜನಗೂಡು)., 1,500 ಮೀಟರ್ಸ್ ಓಟ: 1.ಎಸ್.ಶಶಾಂಕ್ ಗೌಡ (ಸೇಪಿಯಂಟ್ ಕಾಲೇಜು, 4 ನಿಮಿಷ 41.14 ಸೆಕೆಂಡ್), 2.ಕೆ.ಆರ್.ಪ್ರಶಾಂತ್ (ಯುವರಾಜ ಕಾಲೇಜು), 3.ಪ್ರಸನ್ನ ಕುಮಾರ್ (ಅರಸು ಜಿಎಫ್‌ಜಿಸಿ, ಹುಣಸೂರು).
ಮಹಿಳಾ ವಿಭಾಗ: 10 ಸಾವಿರ ಮೀಟರ್ಸ್ ಓಟ: 1.ರಾಧಿಕಾ ಗಂಗಪ್ಪ ಜೋಗಿ (ಟೆರೇಸಿಯನ್ ಕಾಲೇಜು, 47 ನಿಮಿಷ 20.95 ಸೆಕೆಂಡ್), 2.ಮಾದಲಾಂಬಿಕಾ, 3.ಐಶ್ವರ್ಯಾ (ವಿಜಯಾ ಕಾಲೇಜು, ತಿ.ನರಸೀಪುರ)., 400 ಮೀಟರ್ಸ್ ಓಟ: 1.ಐಶ್ವರ್ಯಾ (ವಿಜಯಾ ಕಾಲೇಜು, ತಿ.ನರಸೀಪುರ. ಕಾಲ; 1 ನಿಮಿಷ 10.29 ಸೆಕೆಂಡ್), 2.ಕೀರ್ತನಾ, 3.ಕೆ.ಎಸ್.ಐಶ್ವರ್ಯಾ (ಟೆರೇಸಿಯನ್ ಕಾಲೇಜು)., ಡಿಸ್ಕಸ್ ಥ್ರೋ: 1.ರೇಯಾ (ಟೆರೇಸಿಯನ್ ಕಾಲೇಜು, ದೂರ: 32.73 ಮೀ.), 2. ಅನ್ನಪೂರ್ಣ (ಎಸ್‌ಎಸಿ ಕಾಲೇಜು, ನಾಗಮಂಗಲ), 3.ವರ್ಷಿತಾ (ಪಿಜಿಎಸ್‌ಸಿ).