ಪಿಕಾರ್ಡ್ ಬ್ಯಾಂಕ್‌ನ ಮೀಸಲು ಕ್ಷೇತ್ರಗಳ ಘೋಷಣೆ

30KDR1 sangha
ಕಡೂರು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ವಿಶೇಷ ಮಹಾಸಭೆಯನ್ನು ಎಸ್.ವಿರೂಪಾಕ್ಷಪ್ಪ ಉದ್ಘಾಟಿಸಿದರು. ಎಚ್.ಎಂ.ರೇವಣ್ಣಯ್ಯ, ರಂಗನಾಥ್ ಮತ್ತಿತರರಿದ್ದರು.
Published on

ಕಡೂರು: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ 2025-26ನೇ ಸಾಲಿನಲ್ಲಿ ಮುಂದಿನ 5 ವರ್ಷಗಳಿಗೆ ನಡೆಯುವ ನಿರ್ದೇಶಕ ಸ್ಥಾನಗಳ ಚುನಾವಣೆಗೆ ಮೀಸಲಾತಿ ಕ್ಷೇತ್ರಗಳನ್ನು ಸಭೆಯಲ್ಲಿ ಮಂಡಿಸಿ ಸದಸ್ಯರಿಂದ ಅಂಗೀಕರಿಸಲಾಗಿದೆ ಎಂದು ಪಿಕಾರ್ಡ್ ಬ್ಯಾಂಕಿನ ಪ್ರಭಾರ ಅಧ್ಯಕ್ಷ ಎಸ್.ವಿರೂಪಾಕ್ಷಪ್ಪ ತಿಳಿಸಿದರು.

ಪಿಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ವಿಶೇಷ ಮಹಾಸಭೆಯಲ್ಲಿ ಮಾತನಾಡಿ, ಒಟ್ಟು 14 ಕ್ಷೇತ್ರಗಳ ನಿರ್ದೇಶಕ ಸ್ಥಾನಗಳಿಗೆ ತಾವು ಮಂಡಿಸಿದ ಮೀಸಲಾತಿಯಲ್ಲಿ 8 ಸಾಮಾನ್ಯ ಕ್ಷೇತ್ರಗಳು, ಎಸ್ಸಿ, ಎಸ್ಟಿ, ಬಿಸಿಎಂ-ಎ ಹಾಗೂ ಬಿಸಿಎಂ-ಬಿ ತಲಾ ಒಂದೊಂದು ಕ್ಷೇತ್ರಗಳು ಸೇರಿದಂತೆ ಎರಡು ಮಹಿಳಾ ಮೀಸಲು ಕ್ಷೇತ್ರಗಳ ಮೀಸಲಾತಿ ಘೋಷಣೆಗೆ ಸರ್ವ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದು ಈ ವರ್ಷದೊಳಗೆ ನಡೆಯಲಿರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕ ಸ್ಥಾನಗಳ ಚುನಾವಣೆಗೆ ಮೀಸಲಾತಿ ಅಂಗೀಕರಿಸಲಾಗಿದೆ ಎಂದರು.

ನಿರ್ದೇಶಕ ಎಚ್.ಎಂ.ರೇವಣ್ಣಯ್ಯ ಮಾತನಾಡಿ, ಮೀಸಲಾತಿ ಬಗ್ಗೆ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದ್ದು , ಬ್ಯಾಂಕ್ ಮುಂದಿನ ದಿನಗಳಲ್ಲಿ ಮೀಸಲಾತಿಗೆ ಅನುಗುಣವಾಗಿ ಚುನಾವಣೆ ನಡೆಸಲಿದೆ. ಮೀಸಲಾತಿಗೆ ಅರ್ಹರಾದವರು ಚುನಾವಣೆ ಮೂಲಕ ನಿರ್ದೇಶಕರಾಗಿ ಆಯ್ಕೆಯಾಗಲು ಸಹಕಾರಿಯಾಗಿದೆ ಎಂದರು.

ನಿರ್ದೇಶಕರಾದ ಕೆ.ಎಚ್.ರಂಗನಾಥ್, ಸಿ.ಎಂ.ಕಲ್ಲೇಶಪ್ಪ, ಎಂ.ಎನ್.ನಟರಾಜ್, ಕೆ.ಕೆ.ಪುಪ್ಪಾಲತಾ ಸೋಮೇಶ್, ಓಂಕಾರಪ್ಪ, ಆರ್.ಶ್ರೀ ನಿವಾಸ್‌ಮೂರ್ತಿ, ನಂಜುಂಡಪ್ಪ, ಮೋಹನ್ ನಾಯ್ಕ, ತಿಮ್ಮೇಗೌಡ, ರೇಣುಕಮ್ಮ, ಟಿ.ಶಂಕರಪ್ಪ, ಕೃಷ್ಣನಾಯ್ಕ, ವ್ಯವಸ್ಥಾಪಕ ಸಿ.ಎಚ್.ಹನುಮಂತರಾಯ, ಲೆಕ್ಕಾಧಿಕಾರಿ ಶಿವಾಜಿ ಲಮಾಣಿ, ಆರ್.ಎಚ್.ರಾಜು ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net