

ತರೀಕೆರೆ: ಸಿಡಿಸಿಸಿ ಬ್ಯಾಂಕ್‌ನಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಬಳಿಕ ತರೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಪಿಎಸಿಎಸ್‌ಗಳು ಪ್ರಗತಿಯ ಪಥದತ್ತ ದಾಪುಗಾಲಿಟ್ಟಿವೆ ಎಂದು ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದರು.
ಅಜ್ಜಂಪುರ ಶ್ರೀ ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘದ ಮೂಲ ಸೌಕರ್ಯಗಳ ಅಭಿವೃದ್ಧಿ ಸಲುವಾಗಿ ಬುಧವಾರ 3 ಲಕ್ಷ ರೂ. ಮೊತ್ತದ ಚೆಕ್ ವಿತರಿಸಿ ಮಾತನಾಡಿ, ಸಹಕಾರ ಸಂಘಗಳ ಬಲವರ್ಧನೆಯಾದರೆ, ರೈತ ಕಲ್ಯಾಣ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸಹಕಾರ ಕ್ಷೇತ್ರದ ಧ್ಯೇಯೋದ್ದೇಶ ಅರಿತು ಸೇವೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು ಎಂದರು. ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎಸ್.ಬಿ.ಆನಂದಪ್ಪ, ಪ್ರಮುಖರಾದ ಬಿ.ರಾಜಪ್ಪ, ಸಿದ್ದರಾಮಪ್ಪ, ಶಿವರಾಜ್, ಶಾಂತಕುಮಾರ್, ಎಸ್.ಬಿ.ಆನಂದಪ್ಪ, ಸಿಇಒ ನಾಗರಾಜ್ ರಾವ್ ಇತರರಿದ್ದರು.