ಪಿಂಚಣಿಗೆ ಅಂಚೆ ನೌಕರರ ಪಟ್ಟು

CTD 4 POST STRIKE--02
Published on



ಚಿತ್ರದುರ್ಗ:ಚಿತ್ರದುರ್ಗ ವಿಭಾಗದ ಗ್ರಾಮೀಣ ಅಂಚೆ ನೌಕರರ ಎಐಜಿಡಿಎಸ್‌ಯು ಹಾಗೂ ಎನ್‌ಯುಜಿಡಿಎಸ್‌ಯು ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನೌಕರರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ವಿಭಾಗೀಯ ಕಚೇರಿ ಬಳಿ ಜಮಾಯಿಸಿದ ನೌಕರರು, ಹಲವು ವರ್ಷಗಳಿಂದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಅನೇಕ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದರೂ ನಿರ್ಲಕ್ಷೃ ವಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಟು ತಾಸು ಕೆಲಸ, ಪಿಂಚಣಿ ಮತ್ತಿತರ ಎಲ್ಲ ಸವಲತ್ತುಗಳನ್ನು ನೀಡಬೇಕು. ಸೇವಾ ಹಿರಿತನದ ಆಧರಿಸಿ ವಿಶೇಷ ಇನ್‌ಕ್ರಿಮೆಂಟ್ ನೀಡಬೇಕು. ಅವೈಜ್ಞಾನಿಕ ಗುರಿ ನೀಡಿ ಮೇಳಗಳನ್ನು ಏರ್ಪಡಿಸುವುದು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಗುಂಪುವಿಮೆ ಹಾಗೂ ಗ್ರಾಚ್ಯುಟಿ ಮೊತ್ತಗಳನ್ನು 5 ಲಕ್ಷ ರೂ. ವರೆಗೆ ಹೆಚ್ಚಿಸಬೇಕು. 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶವಿರಬೇಕು. ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು.
ಜನಾರ್ಧನ, ದಾದಾಪೀರ್, ತುಕಾರಾಂ, ಶಾಂತಕುಮಾರ್, ವಿಜಯಕುಮಾರ್, ರಾಜಣ್ಣ, ಪ್ರಕಾಶ್, ಲೋಕೇಶ್, ತಿಮ್ಮಾರೆಡ್ಡಿ,ನಂದಿನಿ, ಪುಟ್ಟರಂಗಮ್ಮ, ಮಮತಾ, ಸರಸ್ವತಿ, ಸುಧಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net