

ಧಾರವಾಡ: ಬೆಳಗಾವಿ ಪಾಲಿಕೆಯಲ್ಲಿ ಸಹಾಯಕ ಆಯುಕ್ತರಾಗಿರುವ ಸಂತೋಷ ಆನಿಶೆಟ್ಟರ್ ಎಂಬುವರಿಗೆ ಸೇರಿದ ೫ ಕಡೆಗಳಲ್ಲಿ ಲೋಕಾಯುಕ್ತ ಅಽಕಾರಿಗಳ ತಂಡ ಗುರುವಾರ ದಾಳಿ ಮಾಡಿದೆ.
ನಗರದ ಮಿಚಿಗನ್ ಲೇಔಟ್‌ನಲ್ಲಿರುವ ಮನೆ, ದೊಡ್ಡನಾಯಕನಕೊಪ್ಪದಲ್ಲಿರುವ ಸೋದರನ ಮನೆ, ತಾಲೂಕಿನ ವೆಂಕಟಾಪೂರ ಬಳಿಯ ಮನೆ, ಹಾವೇರಿಯಲ್ಲಿನ ಮನೆ ಹಾಗೂ ಸತ್ತೂರಿನಲ್ಲಿರುವ ಮನೆಯೊಂದರ ಮೇಲೆ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ, ಡಿಎಸ್‌ಪಿ ಎಸ್.ಎಂ. ರಾಗಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಆಸ್ತಿಯ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ.
ಸಂತೋಷ ಆನಿಶೆಟ್ಟರ್ ಈ ಹಿಂದೆ ಹು-ಧಾ ಮಹಾನಗರ ಪಾಲಿಕೆಯಲ್ಲಿ ವಲಯಾಽಕಾರಿ ಆಗಿದ್ದರು. ಸದ್ಯ ಬೆಳಗಾವಿ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲೇ ವಾಸಿಸುತ್ತಿದ್ದರು. ಬೆಳಗಾವಿಯಲ್ಲೂ ಅವರಿದ್ದ ಮನೆ ಮೇಲೆ ದಾಳಿ ನಡೆದಿದೆ. ಧಾರವಾಡ ಮನೆಯಲ್ಲಿ ಸಂಬAಽಕರಿದ್ದು, ಅವರಿಂದ ಅಽಕಾರಿಗಳ ತಂಡ ಮಾಹಿತಿ ಕಲೆ ಹಾಕಿದೆ.
ಸಂತೋಷ ಅವರ ಐಶಾರಾಮಿ ಮನೆಯಲ್ಲಿ ಆ್ಯಂಟಿಕ್ ವಸ್ತುಗಳು, ಸಾಗವಾನಿ ಕಟ್ಟಿಗೆಯ ಅಲಂಕಾರ ಕಂಡುಬAದಿದೆ. ಹೀಗಾಗಿ ಪ್ರಾಚ್ಯವಸ್ತು ಇಲಾಖೆ ಸೇರಿ ಮನೆಯ ಮೌಲ್ಯ ಅಳತೆ ಮÁಡಲು ಲೋಕೋಪಯೋಗಿ ಇಲಾಖೆ ಅಽಕಾರಿಗಳನ್ನು ಕರೆಸಲಾಗಿತ್ತು. ಅವರ ಮನೆಯಲ್ಲಿ ನಗರದ ಠಾಣೆಯೊಂದರ ಕಾನ್‌ಸ್ಟೇಬಲ್‌ಗೆ ಸೇರಿದ ಆಸ್ತಿಯ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ.