ಪಾಲಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ

IMG_20220915_124139_040_1663325232153
ಸಾಲಿಗ್ರಾಮ ತಾಲೂಕಿನ ಉದಯಗಿರಿ ಗ್ರಾಮದ ಅಂಗನವಾಡಿ ಮಕ್ಕಳಿಗೆ ತಟ್ಟೆ ಲೋಟ ವಿತರಣೆ ಮಾಡಲಾಯಿತು.
Published on

ಸಾಲಿಗ್ರಾಮ: ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕೆಂಬ ಡಾ.ಅಂಬೇಡ್ಕರ್ ಅವರ ಕನಸು ನನಸಾಗಲು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ತಾಲೂಕು ಪರಿಶಿಷ್ಟ ಜನಾಂಗದ ನಿವೃತ್ತ ನೌಕರರ ಅಂಬವಾಡಿ ಭೀಮ್‌ರಾವ್ ಟ್ರಸ್ಟ್ ಅಧ್ಯಕ್ಷ ಭೇರ್ಯ ಈರಯ್ಯ ತಿಳಿಸಿದರು.


ಉದಯಗಿರಿ ಸರ್ಕಾರಿ ಶಾಲಾ ಮಕ್ಕಳಿಗೆ ಶುಕ್ರವಾರ ಆಯೋಜಿಸಿದ್ದ ತಟ್ಟೆ, ಲೋಟ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ದಲಿತರ ಅಭಿವೃದ್ಧಿ ಆಗಿಲ್ಲ. ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಉಳಿಸಲು ಪ್ರತಿಯೊಬ್ಬ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಬೇಕು. ಆಗಮಾತ್ರ ದಲಿತರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹೆಬ್ಸೂರು ಮರಿಯಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಹನಸೋಗೆ ಸಿದ್ದಯ್ಯ, ಮುಖಂಡರಾದ ನಾಗರಾಜು, ಅನಂತರಾಜು, ನಾಗರಾಜು, ದಾಸಯ್ಯ, ಮರಿಯಯ್ಯ, ರಾಜಯ್ಯ, ಮುರಿಯಯ್ಯ, ಚೆಲುವಯ್ಯ, ರಾಮಕೃಷ್ಣಯ್ಯ, ಸಣ್ಣಯ್ಯ, ಕಾಳಯ್ಯ, ಲಕ್ಷ್ಮಯ್ಯ, ಈರಯ್ಯ, ಕೆಂಪುಲಕ್ಕಯ್ಯ,ಸಿಆರ್‌ಪಿ ವಸಂತ್, ಮುಖ್ಯಶಿಕ್ಷಕ ದಶರಥ್, ಶಿಕ್ಷಕಿ ಕೆ.ಸುಧಾಮಣಿ, ಎಸ್ ಡಿಎಂಸಿ ಅಧ್ಯಕ್ಷ ಮಾದೇವ ಸೇರಿದಂತೆ ಪಾಲರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net