ಪಾಲಕರ ನಡವಳಿಕೆ ಮಕ್ಕಳ ಮೇಲೆ ಪ್ರಭಾವ ಬೀರಲಿದೆ

ಹುಣಸೂರು ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕಾ ಸಲಕರಣೆಗಳನ್ನು ಉರಗಪ್ರೇಮಿ ಸ್ನೇಕ್‌ಶ್ಯಾಮ್ ವಿತರಿಸಿದರು. ಎಚ್.ವೈ. ಕೃಷ್ಣ, ಕೃಷ್ಣರಾಜ ಗುಪ್ತಾ, ಸಿರಾಜ್, ಕೆ. ಸಂತೋಷಕುಮಾರ್, ಚನ್ನಕೇಶವ ಇತರರಿದ್ದರು.
HUN-NOV-14-2(CHILDRENS DAY AT URDU SCHOOL)
Published on

ಹುಣಸೂರು: ಪಾಲಕರ ಸಕಾರಾತ್ಮಕ ವರ್ತನೆಯ ಮೂಲಕ ಮಕ್ಕಳಲ್ಲಿ ಉತ್ತಮ ಗುಣಗಳನ್ನು ಮತ್ತು ಹವ್ಯಾಸಗಳನ್ನು ಬೆಳೆಸಲು ಸಾಧ್ಯವಿದೆ ಎಂದು ಉರಗಪ್ರೇಮಿ ಸ್ನೇಕ್‌ಶ್ಯಾಮ್ ಅಭಿಪ್ರಾಯಪಟ್ಟರು.


ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಹುಣಸೂರಿನ ಜಾಗೃತಿ ಕ್ಲಬ್ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ನಗರದ ಸರ್ಕಾರಿ ಉರ್ದು ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಕಲಿಕಾ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.


ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿ ಪಾಲಕರದ್ದಾಗಿದೆ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಿದೆ. ಮನೆಯಲ್ಲಿ ಪಾಲಕರ ನಡವಳಿಕೆ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಪಾಲಕರು ಮೊಬೈಲ್ ಬಳಕೆ ಮಾಡುವುದನ್ನು ನಿಯಂತ್ರಿಸಿಕೊಂಡು ಪುಸ್ತಕಗಳ ಬಳಕೆಯನ್ನು ಮಾಡಿದಲ್ಲಿ ಮಕ್ಕಳ ಮನಸಿನಲ್ಲೂ ಇಂತಹ ಉತ್ತಮ ಗುಣಗಳು ಬೇರೂರಲು ಸಾಧ್ಯ ಎಂದರು.
ಜಾಗೃತಿ ಕ್ಲಬ್ ಅಧ್ಯಕ್ಷ ಎಚ್.ವೈ. ಕೃಷ್ಣ ಮಾತನಾಡಿ, ಕ್ಲಬ್ ವತಿಯಿಂದ ಪರಿಸರ ದಿನಾಚರಣೆ ಸೇರಿದಂತೆ ವಿವಿಧ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕ್ಲಬ್ ಸಂಸ್ಥಾಪಕ ಡಿವೈಎಸ್‌ಪಿ ಮಹೇಶ್‌ಕುಮಾರ್ ನೇತೃತ್ವದಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.


ಕಾರ್ಯಕ್ರಮದಲ್ಲಿ ಬಿ.ಆರ್.ಸಿ ಕೆ. ಸಂತೋಷ್‌ಕುಮಾರ್, ನಗರಸಭಾ ಸದಸ್ಯರಾದ ಕೃಷ್ಣರಾಜ ಗುಪ್ತ, ಸಿರಾಜ್ ರೋಟರಿ ಕ್ಲಬ್ ಕಾರ್ಯದರ್ಶಿ ಚನ್ನಕೇಶವ, ಜಾಗೃತಿ ಕ್ಲಬ್ ಉಪಾಧ್ಯಾಕ್ಷ ಚನ್ನವೀರಯ್ಯ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಂ. ಸ್ವಾಮಿ, ಇ.ಸಿ.ಒ ಕುಮಾರಸ್ವಾಮಿ, ಬಿ.ಐ.ಇ.ಆರ್.ಟಿ ಪ್ರಭಾಕರ್, ಉರ್ದು ಸಿಆರ್‌ಪಿ ರಿಜ್ವಾನ್ ಅಫ್ರೋಜ್, ಶಾಲೆಯ ಮುಖ್ಯಶಿಕ್ಷಕಿ ಫಾಜೀಲಾ ಬಾನು, ಸಹ ಶಿಕ್ಷಕ ಎಚ್.ಆರ್. ಕೇಶವ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net