ಪಾರಂಪರಿಕ ಪ್ರವೇಶ ದ್ವಾರಗಳ ನವೀಕರಣ

Untitled
Published on

ಶತಮಾನದಷ್ಟು ಇತಿಹಾಸವಿರುವ ಪಾರಂಪರಿಕ ಪ್ರವೇಶ ದ್ವಾರಗಳ ನವೀಕರಣಕ್ಕೆ ಪಾಲಿಕೆ ಮುಂದಾಗಿದ್ದು, ಸರ್ಕಾರಿ ಅತಿಥಿ ಗೃಹ ಹಾಗೂ ಲಲಿತಮಹಲ್ ಅರಮನೆ ಬಳಿಯ ಪ್ರವೇಶ ದ್ವಾರವನ್ನು 1.2 ಕೋಟಿ ರೂ. ವೆಚ್ಚದಲ್ಲಿ ದುರಸ್ತಿಗೊಳಿಸುತ್ತಿದೆ.

ನಗರದಲ್ಲಿ ಸಬ್‌ಅರ್ಬನ್ ಬಸ್ ನಿಲ್ದಾಣ, ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿಯ ಕೃಷ್ಣರಾಜ ಬುಲೇವಾರ್ಡ್ ರಸ್ತೆ ಆರಂಭದಲ್ಲಿ, ಮಹಾರಾಣಿ ವಿಜ್ಞಾನ ಕಾಲೇಜಿನಲ್ಲೂ ಕಮಾನು ಹೊಂದಿರುವ ದ್ವಾರಗಳೂ ಸೇರಿದರೆ ಐದು ಪಾರಂಪರಿಕ ದ್ವಾರಗಳಿವೆ.

ಕಬ್ಬಿಣ, ಸಿಮೆಂಟ್ ಬಳಸದೇ ಸುರ್ಕಿ ಗಾರೆ, ಇಟ್ಟಿಗೆಗಳಲ್ಲಿ ಕಮಾನುಗಳನ್ನು ನಿರ್ಮಿಸಲಾಗಿದ್ದು, ಅದ್ಭುತ ಇಂಜಿನಿಯರಿಂಗ್, ಗಟ್ಟಿತನ ಹಾಗೂ ವಾಸ್ತುಶಿಲ್ಪದಿಂದ ಗಮನ ಸೆಳೆಯುವ ಕಟ್ಟಡಗಳಾಗಿವೆ. ಬಿಸಿಲು, ಮಳೆ ಗಾಳಿಯಿಂದ ಇವು ಹಾನಿಯಾಗಿಲ್ಲ. ಆದರೆ, ನಿರ್ವಹಣೆಯಿಂದ ಸೊರಗಿವೆ.

ಕೃಷ್ಣರಾಜ ಬುಲೇವಾರ್ಡ್ ರಸ್ತೆ ಆರಂಭವಾಗುವ ಹುಣಸೂರು ರಸ್ತೆ ಸೇರುವಲ್ಲಿ ಇರುವ ದ್ವಾರವನ್ನು ಮಾತ್ರ ಮಾದರಿಯಾಗಿ ಸಂರಕ್ಷಣೆ ಮಾಡಲಾಗಿದೆ. ವಾಹನಗಳು ಡಿಕ್ಕಿ ಹೊಡೆದು ಹಾನಿ ಆಗದಂತೆ ಕಬ್ಬಿಣದ ಸುರಕ್ಷತೆ ನೀಡಲಾಗಿದ್ದು, ಪಕ್ಕದಲ್ಲಿ ಹೊಸ ದಾರಿಗಳನ್ನು ನಿರ್ಮಿಸಿ, ಅಪಾಯವನ್ನು ತಡೆಗಟ್ಟಲಾಗಿದೆ. ಇದೇ ಮಾದರಿಯಲ್ಲಿ ಉಳಿದ ದ್ವಾರಗಳನ್ನು ಅಭಿವೃದ್ಧಿ ಪಡಿಸಿ, ಸಂರಕ್ಷಣೆ ಮಾಡುವುದು ಪಾಲಿಕೆಯ ಗುರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net