ಪಾಕಿಸ್ತಾನ್ ನ್ಯಾಷನಲ್ ಕಾಂಗ್ರೆಸ್(ಪಿಎನ್‌ಸಿ) ರೀತಿ ವರ್ತಿಸಿದ್ದಾರೆ

11 ckm 1 c.t.ravi
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ
Published on

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್(ಐಎನ್‌ಸಿ) ನಾಯಕರು ಪಾಕಿಸ್ತಾನ್ ನ್ಯಾಷನಲ್ ಕಾಂಗ್ರೆಸ್(ಪಿಎನ್‌ಸಿ) ರೀತಿ ವರ್ತಿಸಿದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮುಂತಾದವರ ಹೇಳಿಕೆಯನ್ನೇ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಬಳಸಿಕೊಳ್ಳುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಪಾಕಿಸ್ತಾನಿಯರಿಗೆ ಅವರ ನಾಯಕರ ಮೇಲೆ ವಿಶ್ವಾಸವಿಲ್ಲ. ಅವರಿಗೆ ಇರುವ ಏಕೈಕ ಭರವಸೆ ರಾಹುಲ್ ಗಾಂಧಿ ಮೇಲೆ. ರಾಹುಲ್ ಗಾಂಧಿಗೆ ಯಾವಾಗ, ಎಲ್ಲಿ, ಏನು ಹೇಳಬೇಕು ಎಂಬ ಪರಿಜ್ಞಾನ ಇದ್ದಿದ್ದರೆ ಕಾಂಗ್ರೆಸ್‌ಗೆ ಈ ದುಸ್ಥಿತಿ ಬರುತ್ತಿರಲಿಲ್ಲ ಎಂದರು.

ಇತ್ತೀಚೆಗೆ ಸಿದ್ದರಾಮಯ್ಯ ನೀಡಿದ ಹೇಳಿಕೆ ಪಾಕಿಸ್ತಾನಲ್ಲಿ ಫ್ಲಾಷ್ ನ್ಯೂಸ್ ಆಗಿತ್ತು. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೋ, ಬಿಡುತ್ತದೋ, ಆದರೆ ಪಾಕಿಸ್ತಾನದಲ್ಲಿ ಸಿದ್ದರಾಮಯ್ಯ ತುಂಬಾ ಪ್ರಖ್ಯಾತರಾಗಿದ್ದಾರೆ. ಅವರ ಹೇಳಿಕೆಯ ತುಣಕನ್ನೇ ಬಳಸಿಕೊಂಡು ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ವಾದಿಸುತ್ತಿದೆ ಎಂದು ಕಿಡಿಕಾರಿದರು.

ಅಧಿಕಾರ ದುರುಪಯೋಗಪಡಿಸಿಕೊಂಡು ವಿಪಕ್ಷ ನಾಯಕರನ್ನು ಬೆದರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಬೆಳಗಾವಿಯಲ್ಲಿ ನನ್ನನ್ನು ಬೆದರಿಸಲು ಪ್ರಯತ್ನಿಸಿದರು. ಈಗ ಕಲಬುರಗಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ಆನೆ ಹೋಗುತ್ತಿರುತ್ತೆ ನಾಯಿ ಬೊಗಳುತ್ತೆ, ಆಕಾಶಕ್ಕೆ ಉಗಿದರೆ ಅವನ ಮುಖಕ್ಕೆ ಬೀಳುವುದು ಎಂಬುದು ಸಾಮಾನ್ಯ ಪದ ಬಳಕೆ. ಇದಕ್ಕೆ ಗುಂಡಾಗಿರಿ ಮಾಡುವುದೇ? ಇದಕ್ಕೆ ಜನ ಉತ್ತರ ಕೊಡುತ್ತಾರೆ. ರಿಪಬ್ಲಿಕ್ ಕಲಬುರಗಿ ಬಹಳ ದಿನ ನಡೆಯುವುದಿಲ್ಲ. ಪೊಲೀಸರು ಆಡಳಿತ ಪಕ್ಷದ ಕೈಗೊಂಬೆ ಆಗಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net