

ಮಲ್ಲಿಕ್ ಆರಾಧ್ಯ ನಾಯಕತ್ವದ ಮೈಸೂರಿನ ಪವರ್ ಹಿಟ್ಟರ್ಸ್ ತಂಡವು ಆರಾಧ್ಯ ಪ್ರೀಮಿಯರ್ ಲೀಗ್ - 6 ನಲ್ಲಿ ಪ್ರಥಮ ಸ್ಥಾನ ಪಡೆಯಿತು. ಟೀಂ ಗಂಧದ ಗುಡಿ ಮತ್ತು ಅಪ್ಪು ಬಾಯ್ಸ ಭೀಮನಹಳ್ಳಿ ನೇತೃತ್ವದಲ್ಲಿ ನಗರದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಫೈನಲ್ ಪಂದ್ಯದಲ್ಲಿ ಸುದರ್ಶನ್ ಆರಾಧ್ಯ ನಾಯಕತ್ವದ ಮಂಡ್ಯದ ಆರಾಧ್ಯ ಟೈಟಾನ್ಸ್ ತಂಡದ ವಿರುದ್ಧ ಜಯ ಸಾಧಿಸಿತು.
ವಿಜೇತ ತಂಡಕ್ಕೆ 25 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ ಅಪ್ ತಂಡಕ್ಕೆ 15 ಸಾವಿರ ರೂ.ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು. ಟೂರ್ನಿಯ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಪವರ್ ಹಿಟ್ಟರ್ ತಂಡದ ಮಧು ಆರಾಧ್ಯ, ಉತ್ತಮ ಬೌಲರ್ ಪ್ರಶಸ್ತಿಯನ್ನು ಅಪ್ಪು ಬಾಯ್ಸ ತಂಡದ ಕೀರ್ತನ್ ಆರಾಧ್ಯ ಪಡೆದುಕೊಂಡರು.