ಪರೀಕ್ಷಾ ಕೇಂದ್ರಗಳಿಗೆ‌‌ ಡಿಸಿ,‌ಎಸ್ಪಿ ಭೇಟಿ

Published on

ಚಾಮರಾಜನಗರ: ದ್ವಿತೀಯ ‌ಪಿಯುಸಿ‌‌ ಪರೀಕ್ಷೆಯ‌ ಮೊದಲ‌ ದಿನವಾದ ಮಾ.4ರಂದು‌ ನಗರದ‌ ಪರೀಕ್ಷಾ ‌ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್ ಕುಮಾರ್ ಭೇಟಿ ನೀಡಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಅಧಿಕ ಸಂಖ್ಯೆಯಲ್ಲಿ ಬಾಲಕಿಯರು ತೆಗೆದುಕೊಂಡಿದ್ದಾರೆ.

ಒಟ್ಟು 6,894 ವಿದ್ಯಾರ್ಥಿಗಳಲ್ಲಿ 3,157 ಬಾಲಕರು ಪರೀಕ್ಷೆ ಬರೆಯುತ್ತಿದ್ದರೆ 3,737 ಬಾಲಕಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಚಾಮರಾಜನಗರದ 4, ಗುಂಡ್ಲುಪೇಟೆ 3, ಯಳಂದೂರು 2, ಕೊಳ್ಳೇಗಾಲ 5, ಹನೂರಿನ 2 ಪರೀಕ್ಷೇ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಪರೀಕ್ಷಾ ಕೇಂದ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಲಾಗಿದೆ. ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಲ್ಲ ಕೇಂದ್ರಗಳಿಗೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.

ಕೇಂದ್ರದ ಬಳಿ ಸುಳಿದಾಡುವ ಅನುಮಾನಸ್ಪಾದ ವ್ಯಕ್ತಿಗಳು ಸಂಚರಿಸಿದರೆ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಮುಖ್ಯವಾಗಿ ಕೇಂದ್ರದ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net