ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿ

Police
Published on

 ಮೇ 26 ರಿಂದ ಜೂನ್ 02 ರವರೆಗೆ ಮೈಸೂರು ನಗರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-2ರ ಪರೀಕ್ಷೆಗಳು ನಡೆಯಲಿದ್ದು, ಸದರಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023 ಸೆಕ್ಷನ್ 163 ರೀತ್ಯ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ.

ಪರೀಕ್ಷಾ ಕೇಂದ್ರಗಳು: ಕೆ.ಪಿ.ಕಾನ್ವೆಂಟ್ ಪ್ರೌಢಶಾಲೆ, ಗೋಕುಲಂ, ಸರ್ಕಾರಿ ಪ್ರೌಢಶಾಲೆ, ಕೈಲಾಸಪುರಂ, ಪುಲಿಕೇಶಿ ರಸ್ತೆ, ಸೇಂಟ್ ಆನ್ಸ್ ಪ್ರೌಢಶಾಲೆ, ಎನ್.ಆರ. ಮೊಹಲ್ಲಾ, ಮೆಜೆಸ್ಟಿಕ್ ಪ್ರೌಢಶಾಲೆ, ಉದಯಗಿರಿ, ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜು, ಪೀಪಲ್ಸ್ ಪಾರ್ಕ್, ಸರ್ಕಾರಿ ವಿಭಜಿತ ಮಹಾರಾಜ ಪದವಿ ಪೂರ್ವ ಕಾಲೇಜು, ನಜರ್‌ಬಾದ್, ಸೇಂಟ್ ಮೇರಿಸ್ ಪ್ರೌಢಶಾಲೆ, ಚರ್ಚ್ ಕಾಂಪೌoಡ್, ನಿರ್ಮಲ ಪ್ರೌಢಶಾಲೆ, ಶ್ರೀರಾಂಪುರ, ಸರ್ಕಾರಿ ಪ್ರೌಢಶಾಲೆ, ಹೂಟಗಳ್ಳಿ, ಶ್ರೀ ವಿದ್ಯಾಜ್ಯೋತಿ ಪ್ರೌಢಶಾಲೆ, ನಾಡನಹಳ್ಳಿ, ಕರ್ನಾಟಕ ಪಬ್ಲಿಕ್ ಶಾಲೆ, ಮಂಚೆಗೌಡನಕೊಪ್ಪಲು, ಮಹಾರಾಜ ಸರ್ಕಾರಿ ಪ್ರೌಢಶಾಲೆ, ಜೆಎಲ್‌ಬಿ ರಸ್ತೆ, ಸರ್ಕಾರಿ ಆದರ್ಶ ವಿದ್ಯಾಲಯ, ಜಾಕಿ ಕ್ವಾರ್ಟರ್ಸ್, ಜ್ಞಾನಗಂಗಾ ಪ್ರೌಢಶಾಲೆ, ಈ ಪ್ರದೇಶಗಳಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರೆ ಅನಧೀಕೃತ ವ್ಯಕ್ತಿಗಳು ಸಂಚರಿಸಬಾರದು ಮತ್ತು ಯಾರು ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದು ಹಾಗೂ ಪರೀಕ್ಷೆ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್/ ಬ್ರೌಸಿಂಗ್ ಸೆಂಟರ್‌ಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ಆದೇಶಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net