

ಚಿತ್ರದುರ್ಗ: ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸುತ್ತಿರುವುದಾಗಿ ಸಾಮಾಜಿಕ ಹೋರಾಟಗಾರ ರಾಜ ಶೇಖರ ಮುಲಾಲಿ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕಸಾಪದ 105 ವರ್ಷ ಇತಿಹಾಸವನ್ನು ಗಮನಿಸಿದರೆ ಈ ವರೆಗೆ ಅಧ್ಯಕ್ಷರಾಗಿರುವಂಥವರು ಒಂದು ಸಮುದಾಯ,ಒಂದು ಪ್ರದೇಶಕ್ಕೆ ಸೇರಿದವರೇ ಆಗಿದ್ದಾರೆ. ಬೆಂಗಳೂರು ಮೂಲದವರೇ ಶೇ.95 ಜನರು ಅಧ್ಯಕ್ಷರಾಗಿದ್ದಾರೆ.
ಕಸಾಪ ವಿರುದ್ಧ ನಿವೃತ್ತರ ಕೇಂದ್ರ,ತುಕ್ಕು ಹಿಡಿದಿದೆ ಎಂಬಿತ್ಯಾದಿ ಅಸಮಾಧಾನ ಮಾತುಗಳು ಕೇಳಿ ಬಂದಿವೆ. ದಿವಂಗತ ಹಿರಿಯ ಪತ್ರಕರ್ತ ರವಿಬೆಳಗೆರೆ ಅವರು, ಕಾರ‌್ಯಕ್ರಮವೊಂದರಲ್ಲಿ ನನ್ನನ್ನು ಉದ್ದೇಶಿಸಿ ತಮ್ಮಂಥವರು ಅಧ್ಯಕ್ಷರಾದರೆ ಕಸಾಪವನ್ನು ರಿಪೇರಿ ಮಾಡಲು ಸಾಧ್ಯವೆಂದು ಹೇಳಿದ್ದರು.
ಅವರ ಹಾಗೂ ಹಿತೈಷಿಗಳ ಸಲಹೆಯನ್ನು ಆಧರಿಸಿ ಮೇ 9ರಂದು ನಡೆಯಲಿರುವ ಅಧ್ಯಕ್ಷ ಸ್ಥಾನದ ಚುನಾವಣಾ ಕಣಕ್ಕೆ ಧುಮುಕುತ್ತಿರು ವುದಾಗಿ ಹೇಳಿದರು. ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತಕ್ಕೆ ಒತ್ತು ಕೊಡುವುದು ಸೇರಿದಂತೆ ಇದೇ ವೇಳೆ ತಾವು ಅಧ್ಯಕ್ಷ ರಾದರೆ ಹಮ್ಮಿಕೊಳ್ಳುವಂಥ ಹತ್ತು ಹಲವು ಯೋಜನೆಗಳ ವಿವರಗಳನ್ನು ನೀಡಿದರು. ತರುಣ್‌ಕುಮಾರ್,ಹನುಮೇಶ್ ಉಪ್ಪಾರ್, ಮಾಲ ತೇಶ್‌ಅರಸ್,ದುರ್ಗೇಶ್ ಇದ್ದರು.