ಪರಿಶ್ರಮವೇ ಸಾಧನೆಗೆ ಮೆಟ್ಟಿಲು

03 TKE 3, ps1
ಪಿರಮೇನಹಳ್ಳಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿರುವ ಪಿ.ಎಸ್.ಕುಮಾರಸ್ವಾಮಿ ಸನ್ಮಾನ ಸ್ವೀಕರಿಸಿದರು. ಕೆ.ಅಣ್ಣಪ್ಪನಾಯ್ಕ, ಸಿ.ಸುನೀಲ್‌ನಾಯ್ಕ, ಎಲ್.ಮಂಜ್ಯಾನಾಯ್ಕ, ಬಿ.ವಿಜಯನಾಯ್ಕ ಇತರರಿದ್ದರು.
Published on

ತರೀಕೆರೆ: ಕಠಿಣ ಪರಿಶ್ರಮವೇ ಸಾಧನೆಗೆ ಮೆಟ್ಟಿಲು ಎಂದು ಪಿಎಸ್‌ಐ ಪರೀಕ್ಷೆಯ ಸೇವಾ ನಿರತ ವಿಭಾಗದಲ್ಲಿ ರಾಜ್ಯಕ್ಕೆ 30ನೇ ರ‌್ಯಾಂಕ್ ಗಳಿಸಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿರುವ ಪಿ.ಎಸ್.ಕುಮಾರಸ್ವಾಮಿ ಹೇಳಿದರು.

ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಪಿರಮೇನಹಳ್ಳಿ ಗ್ರಾಮಸ್ಥರು ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಿಖರ ಗುರಿ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಕಷ್ಟವಲ್ಲ. ಈ ನಿಟ್ಟಿನಲ್ಲಿ ಕಲಿಕೆ ಹಂತದಲ್ಲಿರುವ ಮಕ್ಕಳು ದೃಢ ಸಂಕಲ್ಪ ಮಾಡಿ ದೊಡ್ಡ ಕನಸು ಕಾಣಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆ.ಅಣ್ಣಪ್ಪನಾಯ್ಕ, ಸಿ.ಸುನೀಲ್‌ನಾಯ್ಕ, ಕೆ.ಯಶವಂತ್, ಬಿ.ವಿಜಯನಾಯ್ಕ, ಬಿ.ಧನರಾಜ್, ಎನ್.ರಾಹುಲ್‌ನಾಯ್ಕ, ಎಲ್.ಮಂಜ್ಯಾನಾಯ್ಕ, ಆರ್. ನಾಗರಾಜನಾಯ್ಕ, ಪಿ.ರುದ್ರನಾಯ್ಕ, ವೈ.ಕೆ.ಕಿರಣ್‌ನಾಯ್ಕ, ಆರ್.ಕಿರಣ್‌ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net