

ಚಿತ್ರದುರ್ಗ: ಕೋಟೆ ನಗರಿಯಲ್ಲಿ ಎರಡೂವರೆ ವರ್ಷಗಳ ಹಿಂದೆ ಪ್ರಾರಂಭವಾದ ಮಣಪ್ಪುರಂ ರಿತಿ ಜುವೆಲ್ಲರಿ ಶೋರೂಂ ಚಿತ್ರದುರ್ಗ ಹಾಗೂ ಅಕ್ಕ-ಪಕ್ಕದ ಜಿಲ್ಲೆಗಳ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ವಿಶಾಲ, ಆಕರ್ಷಕ ವಿನ್ಯಾಸದ ಈ ಮಳಿಗೆಯಲ್ಲಿ ಗ್ರಾಹಕರ ಮನಕ್ಕೊಪ್ಪುವ ವೈವಿಧ್ಯಮಯ ವಿನ್ಯಾಸಗಳ ಚಿನ್ನ, ವಜ್ರ, ಬೆಳ್ಳಿಯ ಆಭರಣಗಳ ಖರೀದಿಗೆ ರಿತಿ ನೆಚ್ಚಿನ ತಾಣವಾಗಿದೆ.
ಚಿನ್ನಾಭರಣದ ಕಾರ್ಪೋರೇಟ್(ಕೇರಳ ಮೂಲದ) ಮೊದಲ ಮಳಿಗೆ ಖ್ಯಾತಿಯ ರಿತಿ, ಬೆಂಗಳೂರಿನ ಬೊಮ್ಮಸಂದ್ರ, ಕೋಲ್ಕೋತಾ ಹಾಗೂ ಚೆನ್ನೈನಲ್ಲಿ ಸ್ವಂತ ಆಭರಣ ತಯಾರಿಕೆ ಘಟಕಗಳನ್ನು ಹೊಂದಿದೆ. 1949 ರಲ್ಲಿ ಆರಂಭವಾದ ಮಣಪುರಂ ಸಮೂಹ ಸಂಸ್ಥೆ 2010 ರಿಂದ ಆಭರಣ ತಯಾರಿಕೆ, ವಹಿವಾಟಿಗೂ ಮುಂದಡಿ ಇಟ್ಟಿದೆ. ಒಮ್ಮೆ ಭೇಟಿ ಕೊಟ್ಟಂಥ ಗ್ರಾಹಕರು ಕಾಯಂ ಗ್ರಾಹಕರಾಗುತ್ತಿರುವುದಕ್ಕೆ ಮಳಿಗೆ ಸಿಬ್ಬಂದಿ ಗ್ರಾಹಕಸ್ನೇಹಿ ನಡವಳಿಕೆ ಕಾರಣವಾಗಿದೆ.
ಕೇರಳದ ವಲಪಾಡ್‌ನಲ್ಲಿ 2010ರಲ್ಲಿ ಸ್ಥಾಪನೆಯಾದ ಪ್ರಥಮ ಮಣಪ್ಪುರಂ ಮೊದಲ ಆಭರಣ ಮಳಿಗೆಗಳ ಸಂಖ್ಯೆ ಈಗ ದೇಶದಲ್ಲಿ 12ಕ್ಕೆ ಏರಿದೆ. ಕೋಲಾರ ಹಾಗೂ ಚಿತ್ರದುರ್ಗದ ಸೇರಿ ಕರ್ನಾಟಕದಲ್ಲಿ ಬೆಂಗಳೂರು ಆರು ಮಳಿಗೆಗಳಿವೆ. ಆ್ಯಂಟಿಕ್ ಮತ್ತಿತರ ಶೈಲಿಯ ಆಭರಣಗಳು ದೊರೆಯುತ್ತವೆ. ಇಲ್ಲಿ ಖರೀದಿಸಿದ ಚಿನ್ನಾಭರಣಗಳನ್ನು ಶೇ.100 ಪ್ರಮಾಣದಲ್ಲಿ ಬೈ ಬ್ಯಾಕ್ ಸೌಲಭ್ಯವಿದೆ. ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಪ್ರತ್ಯೇಕ ರಿಯಾಯಿತಿ ಲಭ್ಯವಿದೆ. ಆನ್‌ಲೈನ್ ಖರೀದಿಗೆ ಹಾಗೂ ಆಭರಣಗಳ ಶುದ್ಧತೆ ಪರೀಕ್ಷೆಗೆ ಇಲ್ಲಿ ಅ ವಕಾಶವಿದೆ.
----
ಬಾಕ್ಸ್..
ಗ್ರಾಹಕ ಸ್ನೇಹಿ ಯೋಜನೆಗಳು
ಪ್ರತಿ ತಿಂಗಳು ಕನಿಷ್ಠ ಒಂದು ಸಾವಿರದಿಂದ ಗರಿಷ್ಠ ಅಧಿಕ ಮೊತ್ತದವರೆಗೆ 11 ತಿಂಗಳು ಪಾವತಿಸಿ ನೋ ಮೇಕಿಂಗ್, ನೋವೇಸ್ಟೇಜ್ ನೊಂದಿಗೆ ಆಭರಣ ಖರೀದಿಸಬಹುದಾಗಿದೆ. ಕನಕ ನಕ್ಷತ್ರ, ಕನಕ ಸುರಕ್ಷಾ ಇತ್ಯಾದಿ ಗ್ರಾಹಕ ಸ್ನೇಹಿ ಯೋಜನೆಗಳನ್ನು ಕಂಪನಿ ಪರಿಚಯಿಸಿದೆ. ಮಾಹಿತಿಗೆ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ಇವುಗಳ ವಿವರ ಪಡೆಯಬಹುದಾಗಿದೆ.
---
ವಿಜಯವಾಣಿ ವಿಜಯೋತ್ಸವ
ವಿಜಯವಾಣಿ ವಿಜಯೋತ್ಸವದಡಿ ಗ್ರಾಹಕರು ಆಕರ್ಷಕ ಬಹುಮಾನಗಳಿಗೆ ಭಾಜನರಾಗಬಹುದಾಗಿದೆ. ಕನಿಷ್ಠ 2 ಸಾವಿರ ರೂ.ಗೆ ಒಂದು ಕೂಪನ್ ಕೊಡಲಾಗುತ್ತದೆ. ಲಕ್ಕಿಡಿಪ್ ಡ್ರಾ ಮೂಲಕ ಅದೃಷ್ಟವಂತರನ್ನು ಆಯ್ಕೆ ಮಾಡಲಾಗುತ್ತದೆ. ದೀಪಾವಳಿ ಹಬ್ಬದ ಅಂಗ ವಾಗಿ ಪ್ರತಿ ಗ್ರಾಂ ಬಂಗಾರಕ್ಕೆ ಒಂದು ನೂರು ರೂ.ರಿಯಾಯಿತಿ, ಡೈಮಂಡ್ ಒಂದು ಕ್ಯಾರೆಟ್‌ಗೆ ಬಂಗಾರದ ನಾಣ್ಯ ಇತ್ಯಾದಿ ಷರತ್ತು ಗ ಳು ಅನ್ವಯಿಸಿ ಖರೀದಿಸಬಹುದು.
----
ಕೋಟ್
ಮಣಪ್ಪುರಂ ಸಮೂಹ ಸಂಸ್ಥೆ ಈ ವರ್ಷ ಅಮೃತ ಮಹೋತ್ಸವ ಆಚರಿಸಿಕೊಂಡಿದೆ. ಪ್ರಸ್ತುತ ಕರ್ನಾಟಕದಲ್ಲಿರುವ 12 ಕಂಪನಿಯ ಜುವೆಲ್ಲರಿ ಶೋರೂಂಗಳ ಸಂಖ್ಯೆಯನ್ನು 2025 ಮಾರ್ಚ್‌ನೊಳಗೆ 15 ಕ್ಕೆ ಹೆಚ್ಚಿಸುವ ಯೋಜನೆ ಇದೆ.
ಸಿ.ಪಿ.ಬಾಲು, ಸಿಇಒ, ಮಣಪುರಂ ಜುವೆಲ್ಲರಿ, ಕೇರಳ
----
ಕೋಟ್
ರಿತಿ ಜ್ಯುವೆಲ್ಲರಿಯಲ್ಲಿ ಆಭರಣಗಳ ದರ ಮಾರಾಟ ಸ್ಪರ್ಧಾತ್ಮಕವಾಗಿದೆ. ಬೇರೆ ಬ್ರಾಂಡೆಡ್ ಜುವೆಲ್ಲರಿಗಳಿಗೆ ಹೋಲಿಸಿದರೆ ಕಡಿಮೆ ಮೇಕಿಂಗ್ ಶುಲ್ಕವಿದೆ. ನಮ್ಮದೇ ಆದ ಆಭರಣಗಳ ತಯಾರಿಕೆ ಘಟಕಗಳಿರುವುದರಿಂದಾಗಿ ಇದು ಸಾಧ್ಯವಾಗಿದೆ. ಚಿತ್ರದುರ್ಗದ ಮಳಿಗೆ ಜಿಲ್ಲಾದ್ಯಂತ ಹೆಸರಾಗಿದೆ.
ಶಿಹಾಬುದ್ದೀನ್, ಸೇಲ್ಸ್ ನ್ಯಾಷನಲ್ ಹೆಡ್, ಮಣಪುರಂ ಜುವೆಲ್ಲರಿ
----
ಕೋಟ್
ಹಾಲ್‌ಮಾರ್ಕ್‌ನ್ನು ಹೊಂದಿರುವ ಚಿನ್ನ, ವಜ್ರಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಐಜಿಐ ಸರ್ಟಿಫೈಡ್ ವಜ್ರಾಭರಣಗಳಿಗೆ ಹಾಗೂ 92.5 ಹಾಲ್‌ಮಾರ್ಕ್ ಸ್ಟೆರ್ಲಿನ್ ಬೆಳ್ಳಿ ಆಭರಣಗಳಿಗೆ ಹೆಸರಾಗಿದೆ. ಕಂತಿನಲ್ಲಿ ಹಣ ಪಾವತಿಸಿ ಆಭರಣ ಖ ರೀದಿಸುವ ನಾನಾ ಸ್ಕೀಂಗಳಿವೆ.
ಎಂ.ಪೆರುಮಾಳ್, ಸೇಲ್ಸ್ ಹೆಡ್, ಕರ್ನಾಟಕ, ಆಂಧ್ರಪ್ರದೇಶ, ಮಣಪುರಂ ಜುವೆಲ್ಲರಿ,
---
ಕೋಟ್
ಕೇಂದ್ರ ಸರ್ಕಾರ ಎಚ್‌ಯುಐಡಿ ಗೋಲ್ಡ್ ಮಾರಾಟ ಕಡ್ಡಾಯಗೊಳಿಸಿದೆ. ಕೇಂದ್ರದ ಆದೇಶದ ಒಂದು ವರ್ಷದ ಮೊದಲೇ ಯೂ ನಿಕ್ ಐಡಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರಿಗೆ 916 ಹಾಲ್‌ಮಾರ್ಕ್‌ನ ಬಂಗಾರದ ಆಭರಣಗಳ ಮಹತ್ವದ ಅರಿವಿದೆ. ಪಾರದರ್ಶಕ, ನ್ಯಾಯಯುತ ದರದ ವಹಿವಾಟಿಗೆ ಸಂಸ್ಥೆ ಹೆಸರಾಗಿದೆ. ಮುಂದಿನ ವರ್ಷ ದುರ್ಗದ ಮಳಿಗೆ 3 ನೇ ವಾರ್ಷಿಕೋತ್ಸವಕ್ಕೆ ಕಂಪನಿ ವಿಶೇಷ ಕೊಡುಗೆ ಪ್ರಕಟಿಸುವ ಸಾಧ್ಯತೆ ಇದೆ.
ಎನ್.ರೇವಣಯ್ಯ, ಮ್ಯಾನೇಜರ್, ಮಣಪ್ಪುರಂ ರಿತಿ ಜುವೆಲರ್ಸ, ಚಿತ್ರದುರ್ಗ.
----