ಪರಿಶೀಲನಾ ಚೀಟಿ ಬಿಡುಗಡೆ ಮಾಡಿದ ಕೆಇಎ

kea
Published on

ಬೆಂಗಳೂರು: ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ಇತರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸೀಟು ಹಂಚಿಕೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದರ ಭಾಗವಾಗಿ ಸೋಮವಾರ ಪರಿಶೀಲನಾ ಚೀಟಿಯನ್ನು (ವೆರಿಫಿಕೇಷನ್ ಸ್ಲಿಪ್) ಬಿಡುಗಡೆಗೊಳಿಸಿದೆ.

ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಭರ್ತಿ ಮಾಡುವಾಗ ಮೀಸಲಾತಿ ಇತ್ಯಾದಿ ಕ್ಲೇಮ್ಗಳನ್ನು ಮಾಡಿಕೊಂಡಿರುತ್ತಾರೆ. ಅವೆಲ್ಲವೂ ಈ ಚೀಟಿಯಲ್ಲಿ ಉಲ್ಲೇಖವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಈ ಚೀಟಿಯಲ್ಲಿನ ಕ್ಲೇಮ್ ಪ್ರಕಾರವೇ ಸೀಟು ಹಂಚಿಕೆ ಮಾಡಲಾಗುತ್ತದೆ

ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಂದು ವೇಳೆ ಕ್ಲೇಮ್ ಮಾಡಿರುವುದರಲ್ಲಿ ತಪ್ಪಾಗಿದ್ದಲ್ಲಿ ಸರಿ ಮಾಡಿಕೊಳ್ಳಲು ಸದ್ಯದಲ್ಲೇ ದಿನಾಂಕ ನಿಗದಿ ಮಾಡಲಾಗುವುದು. ಆಗ ಮುಂಗಡವಾಗಿ ದಿನಾಂಕವನ್ನು ನಿಗದಿ ಮಾಡಿಕೊಂಡೇ ಕೆಇಎ ಗೆ ಬಂದು ಸರಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net