ಭಕ್ತಿ ಮಾರ್ಗದಿಂದ ಭಗವಂತನ ಸಾಕ್ಷಾತ್ಕಾರ

swamji
ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ
Published on

ಸಾಗರ: ಧಾರ್ಮಿಕ ಆಚರಣೆ ಮತ್ತು ಪರೋಪಕಾರ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸುತ್ತದೆ. ಭಗಂವಂತನ ಸಾಕ್ಷಾತ್ಕಾರಕ್ಕೆ ಭಕ್ತಿಯೇ ಪ್ರಮುಖ ಮಾರ್ಗ ಎಂದು ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಸಾಗರದ ಶಾರದಾಂಬಾ ದೇವಸ್ಥಾನದಲ್ಲಿ ಪುನರ್ ಅಷ್ಟಬಂಧ, ಕುಂಭಾಭಿಷೇಕ, ಸಹಸ್ರಮೋದಕ ಗಣಹವನ, ತತ್ವಕಲಾಭಿವೃದ್ಧಿ ಹೋಮ ಪೂರ್ಣಾಹುತಿಯಲ್ಲಿ ಪಾಲ್ಗೊಂಡು, ದೇವಸ್ಥಾನದ ಪ್ರಸಾದ ಕೊಠಡಿ, ಅರ್ಚಕರ ನಿವಾಸ, ಆಡಳಿತ ಕಚೇರಿ ಹಾಗೂ ಶಾರದಾಂಬಾ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪ್ರತಿನಿತ್ಯದ ನಮ್ಮ ಕರ್ಮಗಳ ಜತೆಗೆ ಧಾರ್ಮಿಕ ಆಚರಣೆಗೂ ಒತ್ತು ನೀಡಬೇಕು. ದೇವರ ಆರಾಧನೆ ಮತ್ತು ಇನ್ನೊಬ್ಬರಿಗೆ ಉಪಕಾರ ಮಾಡುವುದರಲ್ಲೂ ಮನುಷ್ಯ ಜನ್ಮದ ಸಾರ್ಥಕ ಅಡಗಿದೆ. ನಾವು ಇನ್ನೊಬ್ಬರಿಗೆ ಉಪಕಾರ ಮಾಡದಿದ್ದರೂ ಚಿಂತೆಯಿಲ್ಲ. ಅಪಕಾರ ಮಾಡದಿರುವುದೇ ದೊಡ್ಡ ಉಪಕಾರವಾಗುತ್ತದೆ ಎಂದರು.
ಭಗವಂತನ ಆರಾಧನೆಗೆ ಹಲವು ವಿಧಾನಗಳಿವೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಧರ್ಮಾಚರಣೆ ಬಗ್ಗೆ ವಿಶೇಷ ಒತ್ತು ನೀಡಲಾಗಿದೆ. ಮನುಷ್ಯ ಜೀವನಕ್ಕಾಗಿ ಅನೇಕ ಕೆಲಸಗಳನ್ನು ಮಾಡುತ್ತಾನೆ. ಅದು ಅವನ ವೈಯಕ್ತಿಕ. ಎಲ್ಲ ಕೆಲಸಗಳ ನಡುವೆಯೂ ದೇವರು, ಧರ್ಮಾಚರಣೆಗೆ ಸಮಯ ಮೀಸಲಿಡಬೇಕು ಎಂದು ತಿಳಿಸಿದರು.
ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಕೆ.ವಿ.ಜಯರಾಮ್, ಕೃಷ್ಣಮೂರ್ತಿ, ವಿ.ಚಂದ್ರಶೇಖರ್, ರಾಘವೇಂದ್ರ, ಹರೀಶ್, ಮಹೇಶ್, ಉಷಾ ಗುರುಮೂರ್ತಿ, ಸುಧಾ ಉದಯ್, ವಿ.ಶಂಕರ್, ಚಂದ್ರಶೇಖರ್, ಕೃಷ್ಣಮೂರ್ತಿ ವಾಮನಾಚಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net