

ನಗರದ ಹಿನಕಲ್‌ನಲ್ಲಿ ಮದ್ಯ ಕುಡಿಯುವ ಚಟಕ್ಕೆ ದಾಸನಾಗಿದ್ದ ಪತಿಗೆ ಕೆಲಸಕ್ಕೆ ಹೋಗುವಂತೆ ಬುದ್ಧಿವಾದ ಹೇಳಿದ್ದರಿಂದ ಕುಪಿತಗೊಂಡ ಪತಿ ಪತ್ನಿಯ ಮೇಲೆ ಬಿಸಿ ಸಾಂಬಾರ್ ಎರಚಿದ ಪರಿಣಾಮ ಪತ್ನಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಬಡಾವಣೆ ನಿವಾಸಿ ರಾಜು ತನ್ನ ಪತ್ನಿ ಮಂಗಳಮ್ಮ ಅವರ ಮೇಲೆ ಸಾಂಬಾರ್ ಎರಚಿಸಿದ್ದು, ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಯಲ್ಲಿದ್ದ ಪುತ್ರಿ ಸುಮತಿಗೂ ಸುಟ್ಟಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕುಡಿತಕ್ಕೆ ದಾಸನಾಗಿದ್ದ ರಾಜು ಅವರನ್ನು ಕೆಲಸಕ್ಕೆ ಹೋಗು ಎಂದು ಹೇಳಿದ್ದು, ಇದರಿಂದ ಕೋಪಗೊಂಡು ಅಡುಗೆ ಮನೆಯಲ್ಲಿದ್ದ ಬಿಸಿ ಸಾಂಬಾರ್ ತಂದು ಎರಚಿದ್ದಾನೆ ಎಂದು ಮಂಗಳಮ್ಮ ದೂರು ನೀಡಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.