ಪಡುವಾರಹಳ್ಳಿಯಲ್ಲಿ ಜೋಡಿ ಮಾರಮ್ಮ ಜಾತ್ರೆ

1
Published on

ನಗರದ ಪಡುವಾರಹಳ್ಳಿಯಲ್ಲಿ ಜೋಡಿ ಮಾರಮ್ಮ ಜಾತ್ರೆ ಶ್ರದ್ಧಾಭಕ್ತಿಯೊಂದಿಗೆ ಜರುಗಿತು. ಬಾಯಿ ಬೀಗ ಹಾಕಿಕೊಂಡು ಭಕ್ತರು ಭಕ್ತಿಭಾವ ಮೆರೆದರು.

ಸೋಮವಾರ ಬೆಳಗಿನಿಂದಲೇ ಮಾರಮ್ಮ ದೇವಿಯ ಗುಡಿಯಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿತು. ಮಧ್ಯಾಹ್ನ ಬಾಯಿಗೆ ಬೀಗ ಹಾಕಿಕೊಂಡ ಭಕ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿದರು. ಊರಿನ ಜನರೆಲ್ಲ ದೇವಿಯ ದರ್ಶನ ಪಡೆದು ಧನ್ಯತೆ ಮೆರೆದರು. ಇಡೀ ಊರಿನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಕಾಲ ಬದಲಾದರೂ ಪಡುವಾರಹಳ್ಳಿ ಗ್ರಾಮಸ್ಥರು ಶತಮಾನಗಳಿಂದ ಅನುಸರಿಸಿಕೊಂಡು ಬಂದಿರುವ ಹಲವು ಕಟ್ಟು ಪಾಡುಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ವಿಶೇಷವಾಗಿ ಗಮನ ಸೆಳೆಯಿತು.

ತಂಪಿನ ಮೆರವಣಿಗೆ: ಭಾನುವಾರ ರಾತ್ರಿ ದೇವಸ್ಥಾನದ ಆವರಣದಿಂದ ತಂಪಿನ ಮೆರವಣಿಗೆ ಇಲ್ಲಿನ ಪ್ರಮುಖ ಬೀದಿಗಳಲ್ಲಿ ಸಾಂಗವಾಗಿ ನೆರವೇರಿತ್ತು. ನೂರಾರು ಮಹಿಳೆಯರು ಪಾಲ್ಗೊಂಡು ದೇವಿಗೆ ನಮಿಸಿದರು. ದೇವಸ್ಥಾನಕ್ಕೆ ಭೇಟಿ ನೀಡಿದ ಸಾರ್ವಜನಿಕರು ಬಾಳೆಗೊನೆ ಕಟ್ಟುವ ಮೂಲಕ ತಮ್ಮ ಪೂಜೆ ಸಲ್ಲಿಸಿದರು.ಮಕ್ಕಳಿಗೆ ‘ಅಮ್ಮ’ ಬಂದರೆ ದೇವಿಗೆ ಹರಕೆ ಹೊತ್ತು ಪೂಜೆ ಸಲ್ಲಿಸಿದರೆ ಬೇಗನೆ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇದೆ. ಕಟ್ಟುನಿಟ್ಟಿನ ವ್ರತದೊಂದಿಗೆ ಪೂಜೆ ಸಲ್ಲಿಸಿದರೆ ನಿಶ್ಚಿತವಾಗಿಯೂ ಮಕ್ಕಳು ಗುಣಮುಖರಾಗುತ್ತಾರೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net