ಪಠ್ಯತೇತರ ಚಟುವಟಿಕೆಗಳು ಪ್ರತಿಭಾ ಅನಾವರಣಕ್ಕೆ ಪೂರಕ

CTD 9 SRS--01
Published on

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಬುಧವಾರ 2ನೇ ಹಂತದ ಸಹಪಠ್ಯೇತರ ಚಟುವಟಿಕೆ ಕಾರ್ಯಕ್ರಮವನ್ನು ಏರ್ಪಡಿ ಸಲಾಗಿತ್ತು. ಶಾಲೆಯ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಛದ್ಮವೇಷ,ಡಾಲ್‌ಮೇಕಿಂಗ್,ಹೂವಿನ ಅಲಂಕಾರ,ಇಂಗ್ಲೀಷ್ ಪದ್ಯಗಳ ಕಂ ಠಪಾಠ ಹಾಗೂ ಕ್ಲೇ ಮಾಡ್ಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ಪ್ರಾಚಾರ‌್ಯ ಎಂ.ಎಸ್.ಪ್ರಭಾಕರ್,ವಿದ್ಯಾರ್ಥಿಗಳಿಗೆ ಪಠ್ಯಾಧ್ಯಯನ ಜತೆಗೆ ಪಠ್ಯತೇರ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸಲು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇದು ಮಕ್ಕಳಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವ ಇಂಥ ಆರೋಗ್ಯಕರ ಚಟುವಟಿಕೆಗಳು ಶಿಕ್ಷಣಕ್ಕೆ ಪೂರಕವಾಗಿವೆ.
ವಿದ್ಯಾರ್ಥಿಗಳಿಗೆ ಕಲಿಕೆ ಅನುಭವ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಅವರ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗುತ್ತವೆ ಎಂದರು. ಸಹಪಠ್ಯೇತರ ಚಟುವಟಿಗಳ ಕೋ-ಆರ್ಡಿನೇಟರ್‌ಗಳಾದ ಸುನೀಲ್‌ಭಟ್ ಹಾಗೂ ಲುಬ್ನಾಕೌಸರ್ ಮತ್ತಿತರರು ಇದ್ದರು.
(ಸಿಟಿಡಿ 9 ಎಸ್‌ಆರ್‌ಎಸ್)
ಚಿತ್ರದುರ್ಗ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಕಂಗೊಳಿಸುತ್ತಿರುವ ಪುಟಾ ಣಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net