ಪಕ್ಷದ ಅಭ್ಯರ್ಥಿ ಗೆಲುವಿಗೆ ಪಣ

Published on


ಯಾದಗಿರಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿ ಜಿಲ್ಲೆಗೆ ಹೊರ ರಾಜ್ಯಗಳ ತನ್ನ ಶಾಸಕರನ್ನು ಉಸ್ತುವಾರಿ ಎಂದು ನೇಮಕ ಮಾಡಿದ್ದು, ಜಿಲ್ಲೆಯ ಉಸ್ತುವಾರಿಯಾಗಿ ಜಾರ್ಖಂಡ್ ರಾಜ್ಯದ ರಾಜಮಹಲ ಕ್ಷೇತ್ರದ ಶಾಸಕ ಅನಂತ ಓಜಾ ಗುರುವಾರ ಆಗಮಿಸಿದರು.

ಅಭ್ಯರ್ಥಿ ವೆಂಕಟರಡ್ಡಿ ಮುದ್ನಾಳ್ರೊಡನೆ ಕೆಲಹೊತ್ತು ಔಪಚಾರಿಕ ಸಭೆ ನಡೆಸಿದ ಅವರು, ಕ್ಷೇತ್ರದಲ್ಲಿನ ಪಕ್ಷ ಸಂಘಟನೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಮಾತನಾಡಿ, ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಕೈ ಬಲ ಪಡಿಸಲು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಕಾರಕ್ಕೆ ಬರಬೇಕಿದೆ ಎಂದರು.

ರಾಜ್ಯದಲ್ಲೂ ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕರ್ಾರ ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ. ಶಾಸಕ ವೆಂಕಟರಡ್ಡಿ ಮುದ್ನಾಳ್ ಕಳೆದ 5 ವರ್ಷದಿಂದ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ನಾನು ಚುನಾವಣೆ ಮುಗಿಯುವರೆಗೂ ಕ್ಷೇತ್ರದಲ್ಲೇ ಠಿಕಾಣಿ ಹೂಡಲಿದ್ದು, ಪಕ್ಷದ ಕಾರ್ಯಕರ್ತರು ನಮ್ಮ ಅಭ್ಯಥರ್ಿ ಗೆಲುವಿಗೆ ಹಗಲಿರುಳು ಶ್ರಮಿಸಬೇಕು ಎಂದು ಮನವಿ ಮಾಡಿದರು.

ವೆಂಕಟರಡ್ಡಿ ಅಬ್ಬೆತುಮಕೂರ, ವಿಲಾಸ್ ಪಾಟೀಲ್, ಚನ್ನಾರಡ್ಡಿಗೌಡ ಮದರಕಲ್, ರಾಜಶೇಖರ ಕಾಡಂನೂರ, ಗೋವಿಂದಪ್ಪ ಖಾನಾಪುರ, ಮಾರುತಿ ಕಲಾಲ್, ಸ್ವಾಮಿದೇವ ದಾಸನಕೇರಿ, ಆನಂದ ಗಡ್ಡಿಮನಿ, ಸುರೇಶ ಆಕಳ, ಗೌರಿಶಂಕರ ಹಿರೇಮಠ, ಶಂಕರ ಸಾಹು, ಶರಣಗೌಡ ಅಲ್ಲಿಪುರ, ಜಿಲ್ಲಾ ಮಾಧ್ಯಮ ಸಂಚಾಲಕ ವಿರೂಪಾಕ್ಷಯ್ಯ ಸ್ವಾಮಿ, ಶಿವು ಕೊಂಕಲ್, ಶರಣಗೌಡ ಕನ್ಯಾಕೊಳ್ಳೂರ, ಹಣಮಂತ ವಲ್ಯಾಪುರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net