ಪಂಜುರ್ಲಿ ದೈವಗಳ ಮರು ಪ್ರತಿಷ್ಠೆ

19bhr 1panchjuarli
ಬಾಳೆಹೊನ್ನೂರು ಸಮೀಪದ ಕೋಣೆಮನೆ ಗ್ರಾಮದಲ್ಲಿ ಮರು ಪ್ರತಿಷ್ಠಾಪನೆಗೊಂಡಿರುವ ಶ್ರೀ ಪರಿವಾರ ಸಮೇತ ಪಂಜುರ್ಲಿ ದೈವಗಳು.
Published on

ಬಾಳೆಹೊನ್ನೂರು: ಸಮೀಪದ ಅಡಿಗೆಬೈಲು ಗ್ರಾಮದ ಕೋಣೆಮನೆಯ ಶ್ರೀ ಪರಿವಾರ ಸಮೇತ ಪಂಜುರ್ಲಿ ದೈವಗಳ ದೇವಸ್ಥಾನದ ಮರು ಪ್ರತಿಷ್ಠಾ ಮಹೋತ್ಸವ ಶನಿವಾರ, ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಪುಂಜುರ್ಲಿ ದೈವಗಳ ಮರು ಪ್ರತಿಷ್ಠೆ ಅಂಗವಾಗಿ ದೇವಾಲಯದಲ್ಲಿ ಶನಿವಾರ ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಗಣಹೋಮ, ಬಿಂಬಶುದ್ಧಿ, ಜಲಾಧಿವಾಸ, ರಾಕ್ಷೋಘ್ನ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ಅವಾಸ ಹೋಮ, ದಿಕ್ಬಲಿ ಮುಂತಾದ ಧಾರ್ಮಿಕ ಕಾರ್ಯಗಳು ನಡೆದವು.

ಭಾನುವಾರ ದೈವಗಳ ಪ್ರತಿಷ್ಠಾಪನೆ, ಪೂಜಾ ಹೋಮ, ಮಹಾಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ದರ್ಶನ ಪಾತ್ರಿಯಿಂದ ದರ್ಶನ, ಹೇಳಿಕೆ-ಕೇಳಿಕೆ ನಡೆಯಿತು.

ದೇವಾಲಯದ ಪ್ರಧಾನ ಅರ್ಚಕ ಎಸ್.ಪಿ.ಶ್ರೀನಿವಾಸಮೂರ್ತಿ ಸಂಗಡಿಗರು ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು. ಶಾಸಕ ಟಿ.ಡಿ.ರಾಜೇಗೌಡ, ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಮಾಲತೇಶ್ ಸಿಗಸೆ, ಪಂಜುರ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಸಿ.ರಾಮಸ್ವಾಮಿ, ಗೌರವಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಸತೀಶ್, ಸದಸ್ಯರಾದ ಕೆ.ಸಿ.ಲಕ್ಷ್ಮಣ, ಚಂದ್ರಪ್ಪ, ರಾಘವೇಂದ್ರ, ವೆಂಕಟೇಶ್, ಶಿವರಾಜು, ಕೆ.ಎನ್.ಆದರ್ಶ, ಶೇಖರ, ಮಹೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net