ಪಂಚಾಯತಿಗೊoದು ಎಫ್‌ಪಿಒ ಪ್ರಾರಂಭಿಸಿ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಸಿಗುವಂತಾಗಬೇಕು: ಎಂಎಲ್ಸಿ ಅನಿಲ್ ಕುಮಾರ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ರೈತರ ಉತ್ಪನ್ನಗಳಿಗೆ ನಿರ್ದಿಷ್ಟ ಬೆಲೆ ನಿಗದಿ ಮಾಡಲು ಯಾವುದೇ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಇದರಿಂದ ರೈತರಿಗೆ ನಿರೀಕ್ಷೆ ಲಾಭ ಸಿಗುತ್ತಿಲ್ಲ. ಹೀಗಾಗಿ ಪ್ರತಿ ಪಂಚಾಯತಿಗೊAದು ರೈತ ಉತ್ಪಾದನಾ ಸಂಸ್ಥೆ ಎಫ್.ಪಿ.ಒ ಸ್ಥಾಪನೆ ಮಾಡಬೇಕು. ರೈತರು ತಮ್ಮ ಉತ್ಪನ್ನಗಳಿಗೆ ಬ್ರ‍್ಯಾಂಡ್ ಮಾಡಿ, ಮಾರಾಟದ ಮೂಲಕ ಲಾಭ ಗಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಮುದುವತ್ತಿ ಗ್ರಾಮದಲ್ಲಿ ಆಯೋಜಿಸಿದ್ದ ರೈತ ಉತ್ಪಾದಕ ಸಂಸ್ಥೆ ಹಾಗೂ ವಕ್ಕಲೇರಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಎಫ್‌ಪಿಒ ಒಂದು ಮಹತ್ವದ ಯೋಜನೆ. ಈ ಬಗ್ಗೆ ರೈತರಿಗೆ ಇನ್ನೂ ಅರಿವು ಇಲ್ಲ. ಜನಪ್ರತಿನಿಧಿಗಳಿಗೂ ಇಲ್ಲ. ವಿವಿಧ ಇಲಾಖೆಗಳಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿದೆ. ರೈತರು ಸ್ವಾವಲಂಬಿಗಳಾಗಬೇಕು ಎಂಬುದು ಇದರ ಉದ್ದೇಶ. ಅನುಷ್ಠಾನ ಮಾಡಿ ಮೂರು ವರ್ಷಗಳಾಗಿದ್ದು, ಎಲ್ಲಾ ಕಡೆಯೂ ಜಾರಿಗೆ ಬಂದಿಲ್ಲ. ಎಫ್‌ಪಿಒಗಳು ಬಲಿಷ್ಠವಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಮಣ್ಣು ಕೆಟ್ಟು ಹೋಗಿದೆ. ಕಳೆನಾಶಕ ಹೆಚ್ಚು ಬಳಕೆ ಮಾಡುತ್ತಿದ್ದೇವೆ. ಅಂಗಡಿಗಳಲ್ಲಿ ಬೀಜ ಕೊಡುವಾಗಲೇ ಔಷಧಿಯನ್ನೂ ಕೊಡುತ್ತಿದ್ದಾರೆ. ಇಲಾಖೆಗಳಿಂದ ಹಾಗೂ ತಜ್ಞರಿಂದ ಸಲಹೆ ಪಡೆದು ವ್ಯವಸಾಯ ಮಾಡಿದರೆ ಲಾಭ ಮಾಡಿಕೊಳ್ಳಬಹುದು ಎಂದರು.

ಕೋಲಾರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶಿವಾನಂದ ವಿ.ಹೊಂಗಲ್ ಮಾತನಾಡಿ, ರೈತರ ಶ್ರೇಯೋಭಿವೃದ್ಧಿಗಾಗಿ ರೈತ ಉತ್ಪಾದಕ ಸಂಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ರಾಜ್ಯದಲ್ಲಿ ೧,೪೫೯ ಎಫ್‌ಪಿಒಗಳಿವೆ. ರೈತರು ತಾವು ಬೆಳೆದ ಬೆಳೆಗೆ ತಾವೇ ಬ್ರ‍್ಯಾಂಡ್ ಮಾಡಬೇಕು. ಮಧ್ಯವರ್ತಿ ಹಾವಳಿಯಿಂದ ರೈತರಿಗೆ ಲಾಭ ಕಡಿಮೆ. ರೈತರು ಮಾರುಕಟ್ಟೆ ಮಾಡಿದರೆ ಮಾತ್ರ ಲಾಭ ಎಂದು ಹೇಳಿದರು.

ಎಫ್‌ಪಿಒ ಜಿಲ್ಲಾ ನೋಡಲ್ ಅಧಿಕಾರಿ ತೋಟಗಾರಿಕೆ ಇಲಾಖೆಯ ಡಿ.ಪರಮೇಶ್ ಮಾತನಾಡಿ, ರೈತ ಉತ್ಪಾದಕ ಸಂಸ್ಥೆ ಉದ್ದೇಶ ರೈತರ ಸಬಲೀಕರಣ. ಮಧ್ಯವರ್ತಿಗಳನ್ನು ತಪ್ಪಿಸಬಹುದು. ರೈತರು ಸ್ವಾವಲಂಬಿಗಳು ಆಗಬೇಕು. ಎಫ್‌ಪಿಒಗಳು ಕಂಪನಿ ಕಾಯ್ದೆಯಡಿ ನೋಂದಣಿಯಾಗಿದೆ. ರೈತರಿಗೆ ಸರ್ಕಾರ ನೀಡುವ ಸಬ್ಸಿಡಿ ಮುಂದೆ ಕಡಿಮೆಯಾಗುತ್ತದೆ ಎಂದರು.

ಸAಸ್ಥೆಯ ಅಧ್ಯಕ್ಷ ಎನ್.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ಮಮ್ಮ ಹನುಮಂತಪ್ಪ, ಕೃಷಿ ಇಲಾಖೆಯ ಎನ್.ಶ್ರೀನಿವಾಸ್, ಪಿಡಿಒ ಎಚ್.ಎಂ.ರವಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಸುನಿಲ್, ತೋಟಗಾರಿಕೆ ಅಧಿಕಾರಿ ರಾಘವೇಂದ್ರ, ಕೃಷಿ ಸಹಾಯಕಿ ಲಾವಣ್ಯಾ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ವೈ.ಶಿವಕುಮಾರ್, ವಕ್ಕಲೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮುಂತಾದವರಿದ್ದರು.

ಚಿತ್ರ ೦೧ ಕೆ.ಎಲ್.ಆರ್. ೦೪ : ತಾಲ್ಲೂಕಿನ ಮುದುವತ್ತಿ ಗ್ರಾಮದಲ್ಲಿ ಆಯೋಜಿಸಿದ್ದ ರೈತ ಉತ್ಪಾದಕ ಸಂಸ್ಥೆ ಹಾಗೂ ವಕ್ಕಲೇರಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದ ಎಂ.ಎಲ್.ಸಿ.ಅನಿಲ್ ಕುಮಾರ್. ಕೃಷಿ ವಿಜ್ಞಾನಿ ಶಿವಾನಂದ ವಿ.ಹೊಂಗಲ್, ತೋಟಗಾರಿಕೆ ನೋಡಲ್ ಅಧಿಕಾರಿ ಡಿ.ಪರಮೇಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net