ನೌಕರರು ಆಮಿಷಕ್ಕೆ ಒಳಗಾಗದೆ ಕಾರ್ಯನಿರ್ವಹಿಸಿ

loka
ಶಿವಮೊಗ್ಗದಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಎನ್.ಹೇಮಂತ್, ಎಂ.ಎಸ್.ಸಂತೋಷ್, ಡಾ. ಕೆ.ಟಿ.ಹನುಮಂತಪ್ಪ, ಎಂ.ಎಚ್.ಮಂಜುನಾಥ ಚೌಧರಿ, ಸಿದ್ದಲಿಂಗ ರೆಡ್ಡಿ, ಎನ್.ಮೃತ್ಯುಂಜಯ ಇತರರಿದ್ದರು.
Published on

ಶಿವಮೊಗ್ಗ: ಸರ್ಕಾರಿ ನೌಕರರು ಭ್ರಷ್ಟರಹಿತವಾಗಿ ಕಾರ್ಯ ನಿರ್ವಹಿಸುವ ಜತೆಗೆ ವೃತ್ತಿಪರ ವಿಷಯಗಳನ್ನೂ ಅರಿತುಕೊಳ್ಳಬೇಕು ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು.

ಲೋಕಾಯುಕ್ತದಿಂದ ಸೋಮವಾರ ಏರ್ಪಡಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಸೇವೆಯಲ್ಲಿರುವವರು ಉತ್ತಮ ನಡತೆಯೊಂದಿಗೆ ಕೆಲಸ ಮಾಡಬೇಕು. ಹಣದ ಆಮಿಷಗಳಿಂದ ದೂರವಿರಬೇಕು. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಗಳ ಬಗ್ಗೆ ಸಿಬ್ಬಂದಿಗೆ ಸ್ಪಷ್ಟ ಅರಿವು ಇರಬೇಕು. ಸಂದೇಹಗಳಿದ್ದರೆ ಇಂತಹ ಕಾರ್ಯಾಗಾರಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಸಿಸಿಎಫ್ ಡಾ. ಕೆ.ಟಿ.ಹನುಮಂತಪ್ಪ ಮಾತನಾಡಿ, ಸರ್ಕಾರಿ ನೌಕರರು ಕರ್ತವ್ಯ ನಿರ್ವಹಣೆ ವಿಷಯದಲ್ಲಿ ತಮಗೆ ಅನ್ವಯವಾಗುವ ನಿಯಮಾವಳಿಗೆ ಬದ್ಧರಾಗಿರಬೇಕು. ಮಿತಿಗಳನ್ನು ಅರಿತು ಕೆಲಸ ಮಾಡಬೇಕು. ನೌಕರರು ಎಲ್ಲರಿಗೂ ಉತ್ತರದಾಯಿಗಳಾಗಿರುತ್ತಾರೆ ಎಂದರು.

ಸರ್ಕಾರಿ ಸೇವೆಯಲ್ಲಿ ಇರುವವರು ಕೆಲವೊಮ್ಮೆ ಆರೋಪಗಳಿಗೆ ಗುರಿಯಾಗುವ ಸಂದರ್ಭ ಎದುರಾಗುತ್ತದೆ. ಹಲವು ಬಾರಿ ಕೆಲಸದಲ್ಲಿ ಅರಿವಿಗೆ ಬಾರದೆ ಲೋಪವಾಗುವ ಅಪಾಯವೂ ಇದೆ. ಹೀಗಾಗಿ ಕರ್ತವ್ಯದ ಚೌಕಟ್ಟು, ಆಳ ಮತ್ತು ಮಿತಿ ಅರಿತುಕೊಳ್ಳಬೇಕು. ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿ ಕಾಯ್ದೆಗಳ ಬಗ್ಗೆ ಜ್ಞಾನ ಅಗತ್ಯ ಎಂದು ಹೇಳಿದರು.

ಲೋಕಾಯುಕ್ತ ಎಸ್ಪಿ ಎಂ.ಎಚ್.ಮಂಜುನಾಥ ಚೌಧರಿ, ಡಿವೈಎಸ್ಪಿ ಎನ್.ಮೃತ್ಯುಂಜಯ, ಇನ್ಸ್‌ಪೆಕ್ಟರ್ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net