ನೌಕರರ ವಿಶ್ವಾಸಗಳಿಸಲು ಬಿಎಂಟಿಸಿ ಹೊಸ ಉಪಾಯ

bmtccc
Published on

ಅದರ ಜತೆಗೆ ನೌಕರರು ಯಾವೆಲ್ಲ ವಿಚಾರವನ್ನು ಮಾಡಬಾರದು ಎಂಬುದರ ಬಗ್ಗೆಯೂ ವಿವರಿಸಲಾಗಿದೆ. ಅದರಂತೆ ನೌಕರರು ತಮ್ಮ ಸ್ವ ಹಿತಾಸಕ್ತಿಗಾಗಿ ಯಾವುದೇ ಅವಹೇಳನಕಾರಿ ವಿಚಾರ ಅಥವಾ ಇನ್ನೊಬ್ಬರನ್ನು ಅವಹೇಳನ ಮಾಡುವುದು, ಟೀಕಿಸುವ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು. ಶಿಸ್ತು ನಿಯಮಗಳನ್ನು ಉಲ್ಲಂಘಿಸಿದರೆ ಶಿಸ್ತು ಕ್ರಮಕ್ಕೆ ಗುರಿಪಡಿಸಲಾಗುತ್ತದೆ. ನೌಕರರು ಸೌಜನ್ಯಯುತ ನಡವಳಿಕೆ ರೂಢಿಸಿಕೊಂಡು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕು. ಬಿಎಂಟಿಸಿಯ ಹಿಂದಿನ ಸುವರ್ಣ ದಿನಗಳನ್ನು ಮರುಕಳುಸಲು ಪ್ರತಿ ನೌಕರ ನಿಗಮದೊಂದಿಗೆ ಕೈಜೋಡಿಸಬೇಕು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಕರಪತ್ರದಲ್ಲಿ ಕೋರಿದ್ದಾರೆ.

ಶಿಸ್ತು ಕ್ರಮದ ಎಚ್ಚರಿಕೆ:

ಲಾಕ್‌ಡೌನ್ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ನೌಕರರಿಗೆ ವಿಶೇಷ ಭತ್ಯೆ ನೀಡಿ ಪ್ರೋತ್ಸಾಹಿಸಲಾಗಿದೆ. ಜತೆಗೆ ಲಾಕ್‌ಡೌನ್ ಅವಧಿಯಲ್ಲಿ ಗೈರಾದವರಿಗೆ ವೇತನ ಸಹಿತ ವಿಶೇಷ ರಜೆ ನೀಡಲಾಗಿದೆ. ಸಾರಿಗೆ ಆದಾಯ ಕುಸಿದಿದ್ದರೂ ವೇತನ ಪಾವತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಶ್ರಮವಹಿಸಿ ಸಂಸ್ಥೆಯ ಆರ್ಥಿಕ ಸ್ಥಿತಿ ಉತ್ತಮಪಡಿಸಲು ಶ್ರಮಿಸೋಣ. ಹೀಗಾಗಿ ಯಾವುದೇ ಮುಷ್ಕರ ಹಾಗೂ ಧರಣಿಗಳಿಗೆ ಪ್ರೋತ್ಸಾಹ ನೀಡದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸುವಂತೆ ಕರಪತ್ರದಲ್ಲಿ ಮನವಿ ಮಾಡಲಾಗಿದೆ.

ಸಕಾರಾತ್ಮಕ ಅಂಶಗಳ ವಿವರಣೆ:

ಸಾರಿಗೆ ನೌಕರರು ಕಳೆದ ಡಿಸೆಂಬರ್‌ನಲ್ಲಿ 9 ಬೇಡಿಕೆ ಈಡೇರಿಸಲು ಆಗ್ರಹಿಸಿ ನಾಲ್ಕು ದಿನಗಳ ಕಾಲ ಮುಷ್ಕರ ನಡೆಸಿದ್ದರು. ಆದರೆ, ಈವರೆಗೆ ಪೂರ್ಣ ಪ್ರಮಾಣದಲ್ಲಿ ಬೇಡಿಕೆ ಈಡೇರಿಲ್ಲ. ಹೀಗಾಗಿ ಮಾ. 15ರೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಾ. 16ರಿಂದ ಮತ್ತೊಮ್ಮೆ ಮುಷ್ಕರ ನಡೆಸುವುದಾಗಿ ನೌಕರರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸಿಬ್ಬಂದಿ ವಿಶ್ವಾಸಗಳಿಸಲು ಮುಂದಾಗಿರುವ ಬಿಎಂಟಿಸಿ, ನೌಕರರ ಬೇಡಿಕೆ ಈಡೇರಿಕೆಗೆ ಹಾಗೂ ಕರೊನಾ ಸಂದರ್ಭದಲ್ಲಿ ನೌಕರರ ಪರವಾಗಿ ಕೈಗೊಳ್ಳಲಾದ ಕ್ರಮಗಳ ಕುರಿತು ವಿವರಿಸಲು ಹೊಸ ಉಪಾಯ ಕಂಡುಕೊಂಡಿದೆ. ಅದಕ್ಕೆ ಸಂಬಂಧಿಸಿದಂತೆ ಕರಪತ್ರಗಳ ಮುದ್ರಿಸಿ ಘಟಕಗಳಲ್ಲಿ ನೌಕರರಿಗೆ ನೀಡಲಾಗುತ್ತಿದೆ.

ಬೇಡಿಕೆ ಈಡೇರಿಕೆಗೆ ಮತ್ತೊಮ್ಮೆ ಮುಷ್ಕರ ನಡೆಸಲು ಮುಂದಾಗಿರುವ ಬಿಎಂಟಿಸಿ ನೌಕರರ ವಿಶ್ವಾಸಗಳಿಸಲು ಮುಮದಾಗಿರುವ ಅಧಿಕಾರಿಗಳು, ಕರೊನಾ ನಡುವೆಯೂ ನೌಕರರ ಪರವಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಡಿಪೋಗಳಲ್ಲಿ ಕರಪತ್ರ ವಿತರಿಸಲಾಗುತ್ತಿದೆ.

ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net