ನೋವು, ಸಂಕಟದಿಂದ ಎಲ್ಲರೂ ಹೊರಬರಲಿ

1
Published on

ಭಗವಾನ್ ಬುದ್ಧ ಎಲ್ಲವನ್ನು ಬಿಟ್ಟು ಹೊರಬಂದಂತೆ ನಮ್ಮ ಜೀವನದಲ್ಲಿ ಬಾಧಿಸುತ್ತಿರುವ ನೋವು, ಸಂಕಟದಿಂದ ಎಲ್ಲರೂ ಹೊರಬೇಕು. ಜೀವನ ದೃಷ್ಟಿ ಶಿಕ್ಷಣದಿಂದ ಮಾತ್ರ ಸಿಗಲು ಸಾಧ್ಯ ಎಂದು ಕಾಲೇಜು ಶಿಕ್ಷಣ ಇಲಾಖೆಂು ನಿವೃತ್ತ ಜಂಟಿ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ನಗರದ ಜಂುಲಕ್ಷ್ಮೀಪುರಂನಲ್ಲಿರುವ ಸತ್ಯ ಸಾಯಿಬಾಬಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜನಹಿತ ಸಭಾ ಮೈಸೂರು ಜಿಲ್ಲಾ ಘಟಕ ಸಹಂೋಗದಲ್ಲಿ ಆಂೋಜಿಸಿದ್ದ ‘ವಿಶೇಷ ಉಪನ್ಯಾಸ, ನೇತ್ರದಾನ ಶಿಬಿರ ಹಾಗೂ ಜಗತ್‌ಸ್ಪೂರ್ತಿ( ಪ್ರೊ. ಜಗನ್ನಾಥ ಕೆ. ಡಾಂಗೆ ಅವರ ವ್ಯಕ್ತಿ ಚಿತ್ರಣ) ಕೃತಿ ಬಿಡುಗಡೆ ಸವಾರಂಭದಲ್ಲಿ ಮಾತನಾಡಿದರು.

ವರ್ತಮಾನ ಸಂದರ್ಭದಲ್ಲಿ ನಮಗಿರಬೇಕಾದ ಮಾನವೀಯತೆ, ಶಿಕ್ಷಣ, ಬದುಕು, ಸಮುದಾಯ ಕುರಿತಂತೆ ವಿಶೇಷ ಸಂದೇಶವನ್ನು ಈ ಪುಸ್ತಕ ಒಳಗೊಂಡಿದೆ. ಒಬ್ಬರ ವ್ಯಕ್ತಿತ್ವ ರೂಪುಗೊಳ್ಳಬೇಕಾದರೆ ಸುತ್ತಲಿನ ಪರಿಸರ, ವಾತಾವರಣ ಕುಟುಂಬದ ಸದಸ್ಯರ ಪ್ರೇರಣೆ ಬಹಳ ಮುಖ್ಯ. ಹೀಗಾಗಿ ಯಾವುದೇ ಸಂಕುಚಿತ ಭಾವಕ್ಕೆ ಆಸ್ಪದ ನೀಡದೆ, ಸಮಾಜದ ಎಲ್ಲರನ್ನು ಒಳಗೊಳ್ಳುವ ಮಾನವೀಯ ಚಿಂತನೆಗಳನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾವೆಲ್ಲರೂ ಇಂದು ಮಾನವೀಯ ಚಿಂತನೆಗಳನ್ನು ಅಳವಡಿಸಿಕೊಂಡು ಮಾದರಿ ಸಮಾಜ ಕಟ್ಟಬೇಕಿದೆ ಎಂದರು.

ಜನಹಿತ ಸಭಾ ಅಧ್ಯಕ್ಷ ಡಾ.ಎಂ.ಮೋಹನ್ ಕುವಾರ್, ಇಸ್ರೋ ವಿಜ್ಞಾನಿ ಜಿ.ಉಷಾ, ಒಟಿಸಿಸಿ ಸಮಿತಿ ಸದಸ್ಯ ಮತ್ತು ಸವಾಜ ಸೇವಕಿ ಸುಧಾ ಮೃತ್ಯುಂಜಂುಪ್ಪ, ಕುವೆಂಪು ವಿಶ್ವವಿದ್ಯಾಲಂು ಶಿವಮೊಗ್ಗ ಪ್ರಾಧ್ಯಾಪಕ ಪ್ರೊ ಜಗನ್ನಾಥ ಕೆ.ಡಾಂಗೆ, ಸತ್ಯ ಸಾಯಿಬಾಬಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹಾಗೂ ಕೃತಿಕಾರ ತ್ರಿಮೂರ್ತಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net