ನೊಂದವರ ಪಾಲಿಗೆ ದನಿಯಾಗಿದ್ದರು

Dr. Babu jagajeevana ram
Dr. Babu jagajeevana ram Jayanthi
Published on

ಕಾನಹೊಸಹಳ್ಳಿ: ಹಸಿರುಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್, ದೇಶದ ಬಡ ರೈತರು ಹಾಗೂ ದಮನಿತರ ದನಿಯಾಗಿದ್ದರು ಎಂದು ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ ಆಲೂರು ಹೇಳಿದರು.

ಗ್ರಾಮದ ನಾಡಕಚೇರಿಯಲ್ಲಿ ಬುಧವಾರ ಡಾ.ಬಾಬು ಜಗಜೀವನರಾಮ್ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಮಾತನಾಡಿದರು. ದೇಶದ ಮೊದಲ ಉಪಪ್ರಧಾನಿಯಾಗಿ ಸೇವೆಸಲ್ಲಿದ ಅವರು, ದುಡಿವ ವರ್ಗದ ಪರ ನಿರಂತರ ಹೋರಾಟ ಮಾಡಿದವರಲ್ಲಿ ಪ್ರಮುಖರು ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಎಂ.ಹೊನ್ನೂರಸ್ವಾಮಿ, ಗ್ರಾಮಲೆಕ್ಕಿಗ ಚನ್ನಬಸಯ್ಯ, ಸಿಬ್ಬಂದಿ ಆಗ್ರಹಾರ ಮಂಜುನಾಥ, ಸಿದ್ದೇಶ್ವರ, ಬೋರಣ್ಣ, ರಮೇಶ್, ಫೋಟೊ ನಾಗರಾಜ್, ತಾಯಕನಹಳ್ಳಿ ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net