

2025-26ನೇ ಸಾಲಿಗೆ ಅತ್ಮ ಯೋಜನೆಯಡಿಯಲ್ಲಿ ಮೈಸೂರು ಜಿಲ್ಲೆಯ ತಾಲ್ಲೂಕುಗಳಲ್ಲಿ ಖಾಲಿ ಇರುವ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು -1 (ಒಂದು) ಹುದ್ದೆ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು -2 (ಎರಡು) ಹುದ್ದೆಗಳಿಗೆ ಒಂದು ವರ್ಷದ ನೇರ ಗುತ್ತಿಗೆ ಆಧಾರದ ಮೇಲೆ ನಿಬಂಧನೆ ಮತ್ತು ಷರತ್ತುಗಳಿಗೆ ಒಳಪಟ್ಟಂತೆ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಹೆಚ್.ಡಿ.ಕೋಟೆ ತಾಲ್ಲೂಕು (1) ಹುದ್ದೆಗೆ Post Graduate in Agri / Allied Sector with computer skills or Agri-Graduates with at least 5 years working experience as ATM ವಿದ್ಯಾರ್ಹತೆ ಮತ್ತು Minimum 2 years field experience in Agri Related activities ಅನುಭವವನ್ನು ಹೊಂದಿರಬೇಕು ರೂ. 30.000 ವೇತನ ಮಾಹೆಯನ್ನು ನೀಡಲಾಗುತ್ತದೆ.
ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ಒಟ್ಟು 2 ಹುದ್ದೆಗಳು) ಹೆಚ್.ಡಿ.ಕೋಟೆ ತಾಲ್ಲೂಕು ಸರಗೂರು ಹೋಬಳಿ - 1 ಹುದ್ದೆ ಕೆ.ಆರ್.ನಗರ ತಾಲ್ಲೂಕು ಹೆಬ್ಬಾಳು ಹೋಬಳಿ - 1 ಹುದ್ದೆಗೆ Graduates (Agri & Allied Sectors / Post Graduate (Agri.&Allied Sectors)ವಿದ್ಯಾರ್ಹತೆ ಮತ್ತು Minimum one year experience in Agri Related activities ಹೊಂದಿರಬೇಕು. ರೂ. 25.000 ವೇತನ ಮಾಹೆಯನ್ನು ನೀಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಪಡೆದು, ಅರ್ಜಿಯನ್ನು ನಿಗಧಿತ ನಮೂನೆಯಲ್ಲಿ ಪೂರ್ಣ ಮಾಹಿತಿಯೊಂದಿಗೆ ಆಗಸ್ಟ್ 8 ರ ಸಂಜೆ 5 ಗಂಟೆ ಒಳಗಾಗಿ ಸೀಲು ಮಾಡಿದ ಲಕೋಟೆಯಲ್ಲಿ ಮುದ್ದಾಂ / ನೊಂದಣಿ ಅಂಚೆ ಮೂಲಕ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಆತ್ಮ ವಿಭಾಗ, ಸಾರ್ವಜನಿಕ ಕಛೇರಿಗಳ ಕಟ್ಟಡ, ನ್ಯೂ ಸಯ್ಯಾಜಿರಾವ್ ರಸ್ತೆ, ಮೈಸೂರು ಇವರಿಗೆ ಸಲ್ಲಿಸಲು ಸೂಚಿಸಿದೆ. ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿಗಳೊಂದಿಗೆ ವಿದ್ಯಾರ್ಹತೆಗೆ ಸಂಬoಧಿಸಿದ ಎಲ್ಲಾ ವರ್ಷದ ಅಂಕಪಟ್ಟಿಗಳು, ಘಟಿಕೋತ್ಸವ ಪ್ರಮಾಣ ಪತ್ರಗಳು, ಕಂಪ್ಯೂಟರ್ ಜ್ಞಾನಕ್ಕೆ ಸಂಬAಧಿಸಿದ ಪ್ರಮಾಣ ಪತ್ರಗಳು, ಸದರಿ ವೃತ್ತಿಗೆ ಸಂಬAಧಿಸಿದ ಅನುಭವ ಪ್ರಮಾಣ ಪತ್ರಗಳನ್ನು ಲಗತ್ತಿಸುವುದು ಕಡ್ಡಾಯವಾಗಿರುತ್ತದೆ ಮತ್ತು ಎಲ್ಲಾ ಪ್ರಮಾಣ ಪತ್ರಗಳ ದೃಢೀಕೃತ ಪ್ರತಿಗಳನ್ನು ಸಲ್ಲಿ¸ಬೇಕಾಗಿದೆ.
ಹೆಚ್ಚಿನ ವಿವರಗಳಿಗೆ ಜಂಟಿ ಕೃಷಿ ನಿರ್ದೇಶಕರು, ಮೈಸೂರು ಕಛೇರಿ ದೂರವಾಣಿ ಸಂಖ್ಯೆ: 0821-2442239ನ್ನು ಸಂಪರ್ಕಿಸಬಹುದು ಎಂದು ಮೈಸೂರು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಹಾಗೂ ಯೋಜನಾ ನಿರ್ದೇಶಕರು(ಆತ್ಮ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.