ನೇಕಾರರ ಸಮೀಕ್ಷೆಗೆ ಆ್ಯಪ್ ಅಸ್ತಿತ್ವಕ್ಕೆ

whatsapp-iphone-android-logo-app
Published on

ನೇಕಾರ ಸಮುದಾಯದ ನಿಖರ ಜನಸಂಖ್ಯೆ ಬಗ್ಗೆ ಮಾಹಿತಿ ಪಡೆಯಲು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಆ್ಯಪ್ ಸಿದ್ಧಪಡಿಸಿದ್ದು, ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಸಮೀಕ್ಷೆ ನಡೆಸಲಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ತಿಳಿಸಿದರು.

ಒಕ್ಕೂಟದ ವತಿಯಿಂದ ಪ್ರತಿ ಹಳ್ಳಿಗೂ ಭೇಟಿ ನೀಡಿ ಸಮುದಾಯದ ಜನರ ಸಂಖ್ಯೆಯನ್ನು ಆ್ಯಪ್ ಮೂಲಕ ನಮೂದಿಸಲಾಗುತ್ತದೆ. ಇದೇ ವೇಳೆ ಜಾತಿಗಣತಿ ವರದಿಗೆ ಬಂದ ಅಧಿಕಾರಿಗಳಿಗೆ ಸಮುದಾಯದವರು ಸರಿಯಾದ ಮಾಹಿತಿ ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ನಮ್ಮ ಸಮುದಾಯದ ಜನರಿದ್ದಾರೆ. ರಾಜ್ಯದಲ್ಲಿ 45 ರಿಂದ 50 ಲಕ್ಷ ಸಂಖ್ಯೆ ಇದೆ. ಆದರೆ, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ತಮ್ಮ ವರದಿಯಲ್ಲಿ ಕೇವಲ 9 ಲಕ್ಷ ತೋರಿಸಿರುವುದು ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ದಿನೇಶ್, ಮುಖಂಡರಾದ ಆರ್.ಮೂರ್ತಿ, ಜಗದೀಶ್, ಮಂಜುಳಾ ಶ್ರೀನಿವಾಸ್, ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net