ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಅಗತ್ಯ

RAVANDURU 1
ಪಿರಿಯಾಪಟ್ಟಣ ತಾಲೂಕಿನ ಅರೇನಹಳ್ಳಿ ಗ್ರಾಮದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಮರು ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Published on

ರಾವಂದೂರು: ಇಬ್ರಾಹಿಂ ಖಲೀಲ್-ಉಲ್ಲಾ ಹಾಗೂ ಇಬ್ರಾಹಿಂಜಬೀ-ಉಲ್ಲಾ ಅವರ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಮುಸ್ಲಿಂ ಧರ್ಮಗುರು ಇರ್ಮಾನ್ ಪಾಷ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕು ಅರೇನಹಳ್ಳಿ ಗ್ರಾಮದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಈದ್ಗಾ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ನಾವೆಲ್ಲರೂ ಭಾರತೀಯರು ಎಂಬ ಮನೋಭಾವದಿಂದ ಬದುಕು ನಡೆಸಬೇಕು. ಯಾವುದೇ ದ್ವೇಷ, ಅಸೂಯೆ ಮನೋಭಾವ ಹೊಂದಿರಬಾರದು ಎಂದು ತಿಳಿಸಿದರು.

ಜಾಮಿಯಾ ಕಮಿಟಿ ಅಧ್ಯಕ್ಷ ಇರ್ಮಾನ್‌ಷರೀಫ್, ಕಾರ್ಯದರ್ಶಿ ಫೈರೋಜ್‌ಪಾಷ, ರಾಮತ್, ಗ್ರಾ.ಪಂ.ಸದಸ್ಯ ಅಬ್ಬಾಸ್, ಮಾಜಿ ಸದಸ್ಯ ನದೀಮ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net