ನೆರೆಯಿಂದ 737 ಕೋಟಿ ರೂ. ಹಾನಿ

Joida-Karwar Road Anashi Ghat Damaged
Published on

ಕಾರವಾರ: ಕಳೆದ ವಾರ ಸಂಭವಿಸಿದ ಪ್ರವಾಹದಿಂದ ಜಿಲ್ಲೆಯಲ್ಲಿ 737.54 ಕೋಟಿ ರೂಪಾಯಿ ಆಸ್ತಿ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ನೀಡಿದೆ. ನೆರೆಯಿಂದ ಆದ ಪರಿಣಾಮದ ಕುರಿತು ವಿವರಿಸಿದೆ.
387 ಕೋಟಿ ರೂಪಾಯಿ ರಸ್ತೆಗಳು, 149 ಕೋಟಿ ರೂಪಾಯಿ ಸೇತುವೆಗಳಿಂದ, 4.93 ಕೋಟಿ ರೂಪಾಯಿ ಸರ್ಕಾರಿ ಕಟ್ಟಡಗಳಿಗೆ, 5.54 ಕೋಟಿ ರೂಪಾಯಿ ಕುಡಿಯುವ ನೀರಿನ ಯೋಜನೆಗಳಿಗೆ, 89.92 ಕೋಟಿ ರೂಪಾಯಿ ಸಣ್ಣ ನೀರಾವರಿ ಇಲಾಖೆಗೆ, 4.49 ಕೋಟಿ ರೂಪಾಯಿ, ಹೆದ್ದಾರಿ ಇಲಾಖೆಗೆ 95 ಕೋಟಿ ರೂಪಾಯಿ, ಹೆಸ್ಕಾಂಗೆ 4.49 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಇದನ್ನು ಹೊರತುಪಡಿಸಿ 8984 ಮನೆಗಳಿಗೆ ನೀರು ನುಗ್ಗಿ ನಷ್ಟವಾಗಿದೆ. 1472 ಮನೆಗಳು ಬಿದ್ದಿ ಹೋಗಿವೆ. 1123 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 562 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಜಿಲ್ಲಾಧಿಕಾರಿಗಳ ವಿಪತ್ತು ಪರಿಹಾರ ನಿಧಿ ಖಾತೆಯಲ್ಲಿ 47.17 ಕೋಟಿ ರೂಪಾಯಿ ಲಭ್ಯವಿದೆ. ಅದರಿಂದ ಪರಿಹಾರ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಮಾಹಿತಿ ನೀಡಿದ್ದಾರೆ.
ಶೀಘ್ರ ಸಂಚಾರ ಆರಂಭ: ಅಂಕೋಲಾ-ಯಲ್ಲಾಪುರ ಅರಬೈಲ್ ಘಟ್ಟ ರಸ್ತೆಯಲ್ಲಿ ಶೀಘ್ರ ಎಲ್ಲ ವಾಹನ ಓಡಾಟಕ್ಕೆ ಕ್ರಮ ವಹಿಸಲಾಗುವುದು. ಕಾರವಾರ-ಜೊಯಿಡಾ ಅಣಶಿ ಘಟ್ಟ ರಸ್ತೆಯಲ್ಲಿ ಸಂಚಾರ ಇನ್ನಷ್ಟು ವಿಳಂಬವಾಗಬಹುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net