ನೆಮ್ಮದಿಯ ಬದುಕಿಗೆ ಬುದ್ಧನ ಮಾರ್ಗವೇ ಸನ್ಮಾರ್ಗ

IMG-20240722-WA0051
ತಿ.ನರಸೀಪುರ ಪಟ್ಟಣದ ತ್ರಿವೇಣಿ ನಗರದಲ್ಲಿರುವ ನಳಂದ ಬುದ್ಧ ವಿಹಾರದಲ್ಲಿ ಭಾನುವಾರ ಸಂಜೆ ಗೌತಮ ಬುದ್ಧ ಎಜುಕೇಷನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ದಮ್ಮಚಕ್ಕ ಪಬತ್ತನ-ಒಂದು ಸಂವಾದ ಕಾರ್ಯಕ್ರಮದಲ್ಲಿ ಮನೋರಕ್ಖಿತ ಥೇರ ಬಂತೇಜಿ, ಬಂತೆ ಬೋರತ್ನ, ಧನಂಜಯ, ರಾಜೇಶ್, ಸೀನಪ್ಪ, ಬಿ.ಆರ್.ಪುಟ್ಟಸ್ವಾಮಿ, ಎನ್.ಲಿಂಗಪ್ಪಜಾಜಿ ಇತರರಿದ್ದರು.
Published on

ತಿ.ನರಸೀಪುರ: ಜಗತ್ತಿನಲ್ಲಿ ಶಾಂತಿ, ನೆಮ್ಮದಿಯ ಬದುಕಿಗೆ ಬುದ್ಧನ ಮಾರ್ಗವೇ ಸನ್ಮಾರ್ಗವಾಗಿದೆ. ಹಾಗಾಗಿ ಕಟ್ಟುಕಥೆಯಿಂದ ಸೃಷ್ಟಿಸಿದ ಯಾವುದೇ ದೇವರು ಯಾರನ್ನೂ ಉದ್ದಾರ ಮಾಡುವುದಿಲ್ಲ ಎಂದು ಮನೋರಕ್ಖಿತ ಥೇರ ಬಂತೇಜಿ ಹೇಳಿದರು.

ಪಟ್ಟಣದ ತ್ರಿವೇಣಿ ನಗರದಲ್ಲಿರುವ ನಳಂದ ಬುದ್ಧ ವಿಹಾರದಲ್ಲಿ ಭಾನುವಾರ ಸಂಜೆ ಗೌತಮ ಬುದ್ಧ ಎಜುಕೇಷನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ದಮ್ಮಚಕ್ಕ ಪಬತ್ತನ-ಒಂದು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಮ್ಮ ಎಂದರೆ ಜ್ಞಾನ ಮತ್ತು ಬೆಳಕು. ಆದ್ದರಿಂದ ಧಮ್ಮವನ್ನು ಅರ್ಥ ಮಾಡಿಕೊಂಡು ಪಂಚಶೀಲ ತತ್ವವನ್ನು ಅನುಸರಿಸಿದರೆ ನೆಮ್ಮದಿಯ ಬದುಕು ಎಲ್ಲರದ್ದಾಗಲಿದೆ ಎಂದರು.

ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮವನ್ನು ನಾವು ಇನ್ನೂ ಅರ್ಥೈಸಿಕೊಂಡಿಲ್ಲ. ಆದರೆ, ಬೇರೆ ದೇಶದವರು ಅರ್ಥ ಮಾಡಿಕೊಂಡು ಧಮ್ಮದಂತೆ ನಡೆಯುತ್ತಾ ಅಭಿವೃದ್ಧಿ ಹೊಂದಿದ್ದಾರೆ. ಇಲ್ಲಿನ ಸರ್ಕಾರಗಳಿಗೂ ಬುದ್ಧ ಅರ್ಥವಾಗಿದ್ದರೆ ಈ ದಿನವನ್ನು ಬುದ್ಧ ವಿಶ್ವದ ದಿನ ಘೋಷಿಸುತ್ತಿದ್ದರು ಎಂದು ತಿಳಿಸಿದರು.

ಬಂತೆ ಬೋರತ್ನ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ತೋರಿಸಿಕೊಟ್ಟ ಬುದ್ಧ ಮಾರ್ಗದಲ್ಲಿ ಸಮಸ್ತ ದಲಿತ ಸಮುದಾಯ ನಡೆಯಬೇಕಾಗಿದೆ. ಆದ್ದರಿಂದ ಮಕ್ಕಳಿಗೆ ಧಮ್ಮದ ಪ್ರಜ್ಞೆ ಅವಶ್ಯಕತೆಯಿದೆ. ಪಾಲಕರೂ ಬುದ್ಧ ವಿಹಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ಮಾತನಾಡಿ, ನಮ್ಮೆಲ್ಲರ ವಿಮೋಚಕ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಶೋಷಿತ ಸಮುದಾಯ ಪ್ರಜ್ಞಾವಂತರಾಗುತ್ತಿದ್ದು, ಬೌದ್ಧ ಧರ್ಮದತ್ತ ಮುಖ ಮಾಡುತ್ತಿದ್ದಾರೆ. ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿ, ಬೌದ್ಧ ಕೇಂದ್ರಗಳಲ್ಲಿ ಧ್ಯಾನ ಮಾಡುವ ಮೂಲಕ ಜ್ಞಾನದ ಸಂಪತ್ತು ಸೇರಿದಂತೆ ಎಲ್ಲವೂ ಪಡೆಯುತ್ತಾ ಸಾಮಾಜಿಕ ಅಭಿವೃದ್ಧಿಯನ್ನು ಹೊಂದುತ್ತೇವೆ ಎಂದು ತಿಳಿಸಿದರು.

ವಲಯ ಅರಣ್ಯಾಕಾರಿ ರಾಜೇಶ್ ಮಾತನಾಡಿದರು. ಟ್ರಸ್ಟ್‌ನ ಟ್ರಸ್ಟಿಗಳಾದ ಸೀನಪ್ಪ, ಬಿ.ಆರ್.ಪುಟ್ಟಸ್ವಾಮಿ, ಎನ್.ಲಿಂಗಪ್ಪಾಜಿ, ಮರಿಮಹದೇವಯ್ಯ(ಅರ್ಜುನ್), ಪುಟ್ಟರಾಜು, ಶಿವಣ್ಣ, ಯರಗನಹಳ್ಳಿ ಬಿ.ಮಹದೇವಸ್ವಾಮಿ, ನರಸಿಂಹಯ್ಯ ಜಗದೀಶ್, ಕೆಂಚಪ್ಪ, ಶಿವಮಲ್ಲಯ್ಯ, ನಂಜುಂಡಯ್ಯ, ಶಿವಣ್ಣ, ಸುರೇಶ ಹಾಗೂ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net