ನೆಚ್ಚಿನ ನಟನನ್ನು ನೋಡಲು ಜನ ಮುಗಿ ಬಿದ್ದರು

Published on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಮಾರ್ಗವಾಗಿ ಹಾದು ಹೋದ ನೆಚ್ಚಿನ ನಟ ನಂದಮೂರಿ ಬಾಲಕೃಷ್ಣರವರನ್ನು ನೋಡಲು ಜನ ಮುಗಿ ಬಿದ್ದರು.

ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಂದೂಪುರ ವಿಧಾನಸಭಾ ಕ್ಷೇತ್ರಕ್ಕೆ ಹೋಗಲು ಬಾಲಕೃಷ್ಣರವರು ಗೌರಿಬಿದನೂರು ಮಾರ್ಗವಾಗಿ ತೆರಳಿದರು. ಇದರ ಬಗ್ಗೆ ಮಾಹಿತಿ ಪಡೆದ ಅಭಿಮಾನಿಗಳು ರಸ್ತೆಯ ಬದಿಯಲ್ಲಿ ನಿಂತರು ನೆಚ್ಚಿನ ನಟನನ್ನು ಸ್ವಾಗತಿಸಿದರು. ಜಯಕಾರದ ಘೋಷಣೆಗಳನ್ನು ಕೂಗಿದ ಸಂತಸ ವ್ಯಕ್ತಪಡಿಸಿದರು. ಅಭಿಮಾನಿಗಳ ಅಭಿಮಾನಕ್ಕೆ ಸಂತಸಗೊಂಡ ಬಾಲಕೃಷ್ಣರವರು ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗೇಟ್ ಬಳಿ ಕಾರನ್ನು ನಿಲ್ಲಿಸಿ, ಹೊರಗೆ ಬಂದು ಜನರತ್ತ ಕೈ ಬೀಸಿದರು. ಕೆಲವರಿಂದ ಹಾರವನ್ನು ಹಾಕಿಸಿಕೊಂಡು ಅಭಿಮಾನಕ್ಕೆ ಕೈ ಮುಗಿದರು.

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ಸಂಸ್ಥಾಪಕ ದಿವಂಗತ ಎನ್.ಟಿ.ರಾಮರಾವ್ ಪುತ್ರ ನಂದಮೂರಿ ಬಾಲಕೃಷ್ಣ. ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಅಭಿಮಾನ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಆಂಧ್ರ ಗಡಿ ಭಾಗದಲ್ಲಿರುವ ಜಿಲ್ಲೆಯಲ್ಲೂ ಅಭಿಮಾನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಅವರು ಪ್ರತಿನಿಧಿಸುವ ಹಿಂದೂಪುರ ವಿಧಾನಸಭಾ ಕ್ಷೇತ್ರಕ್ಕೆ ತೆರಳುವ ಸಂದರ್ಭದಲ್ಲಿ ಮಾರ್ಗಮಧ್ಯೆ ಇಲ್ಲಿನ ಅಭಿಮಾನಿಗಳೊಂದಿಗೆ ಆಗಾಗ ಬೆರೆಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net