

ಸಾಲಿಗ್ರಾಮ: ತಂದ್ರೆ ಅಂಕನಹಳ್ಳಿ ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿ ಬಸವರಾಜಪುರ ಮಾರ್ಕಂಡೇಗೌಡ, ಉಪಾಧ್ಯಕ್ಷರಾಗಿ ಲೋಕೇಶ್ ಅವಿರೋಧ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎರಡು ಸ್ಥಾನಗಳಿಗೆ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು.
ಹೇಮಾವತಿ ನೀರು ಬಳಕೆದಾರರ ಮಹಾಮಂಡಲದ ಉಪಾಧ್ಯಕ್ಷ ಮುದುಗುಪ್ಪೆ ಬಾಲರಾಜ್, ಮಹಾಮಂಡಲದ ಕಾರ್ಯದರ್ಶಿ ಕುಮಾರ್, ನೀರು ಬಳಕೆದಾರರ ಸಂಘದ ಕಾರ್ಯದರ್ಶಿ ಶಿವಣ್ಣ, ತಾಪಂ ಮಾಜಿ ಅಧ್ಯಕ್ಷ ತಂದ್ರೆ ಕೊಪ್ಪಲು ರವಿ ಮತ್ತು ಸಂಘದ ನಿರ್ದೇಶಕರು ಹಾಜರಿದ್ದರು. ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ನಿರ್ದೇಶಕರು ಅಭಿನಂದಿಸಿದರು.