

ಕೂರ್ಗಳ್ಳಿಯ ಕೆಆರ್‌ಎಸ್ ರಸ್ತೆಯ ಆಟೋಮೋಟಿವ್ ಆಕ್ಸೈಲ್ ಎದುರು ಸೋಮವಾರ ಮಧ್ಯಾಹ್ನ ನೀರಿನ ಟ್ಯಾಂಕರ್ ಚಕ್ರಕ್ಕೆ ಸಿಲುಕಿ ಕೆಪಿಟಿಸಿಎಲ್ ಮಹಿಳಾ ಉದ್ಯೋಗಿ ಮೃತಪಟ್ಟಿದ್ದಾರೆ.
ಇಲವಾಲದ ನಿವಾಸಿ ರೇವಣ್ಣ ಅವರ ಪತ್ನಿ ಭಾಗ್ಯ(40)ಮೃತರು. ಅವರು ಕೂರ್ಗಳ್ಳಿ ಕಡೆಯಿಂದ ಹೂಟಗಳ್ಳಿ ಸಿಗ್ನಲ್ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದು, ಈ ವೇಳೆ ಹಿಂದಿನಿಂದ ಬಂದ ನೀರಿನ ಟ್ಯಾಂಕರ್ ಸ್ಕೂಟರ್‌ನ ಹ್ಯಾಂಡಲ್‌ಗೆ ತಾಕಿದೆ. ಇದರಿಂದ ಚಾಲನೆಯಲ್ಲಿ ನಿಯಂತ್ರಣ ಕಳೆದುಕೊಂಡ ಭಾಗ್ಯ ಅವರು, ಬಲ ಭಾಗ್ಯಕ್ಕೆ ಬಿದ್ದಿದ್ದು, ಟ್ಯಾಂಕರ್‌ನ ಹಿಂದಿನ ಚಕ್ರ ತಲೆಯ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಪತಿ ನೀಡಿದ ದೂರಿನ ಮೇರೆಗೆ ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.