ನಿಸ್ವಾರ್ಥ ಸೇವೆಯ ಪ್ರತಿರೂಪ ಸಿದ್ಧಗಂಗಾಶ್ರೀ

klr school
ಕೋಲಾರ ತಾಲೂಕಿನ ರಾಜಕಲ್ಲಹಳ್ಳಿ ಸರ್ಕಾರಿ ಶಾಲೆಯ ಶತಮಾನೋತ್ಸವ ಹಾಗೂ ಶಿವಕುಮಾರ ಮಹಾಸ್ವಾಮಿಗಳ 6ನೇ ಪುಣ್ಯಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ವಿ.ಸಿ.ಒಡೆಯರ್​, ಅಪ್ಪಯ್ಯಣ್ಣ, ಜನಾರ್ದನ್​ ರೆಡ್ಡಿ, ಮಂಜುನಾಥ್​, ಸತ್ಯನಾರಾಯಣ, ನಂಜುಂಡಗೌಡ, ಮಂಜುನಾಥ್​ ಇದ್ದರು.
Published on

ಕೋಲಾರ: ನಿಸ್ವಾರ್ಥ ಸೇವೆಯ ಪ್ರತಿರೂಪ ಸಿದ್ಧಗಂಗಾ ಮಠದ ಡಾ.ಶ್ರೀ.ಶಿವಕುಮಾರ ಸ್ವಾಮಿಜಿ. ಸಮಾಜದಲ್ಲಿ ಬದುಕಿನ ಜತೆಗೆ ಸಾಮಾಜಿಕ ಕಳಕಳಿ ಇದ್ದಾಗ ಮಾತ್ರ ಜೀವನ ಅರ್ಥ ಪೂರ್ಣ ಎಂಬುದಕ್ಕೆ ಶ್ರೀಗಳೇ ಆದರ್ಶ ಎಂದು ಸೂಲೂರು ಗ್ರಾಪಂ ಮಾಜಿ ಅಧ್ಯಕ್ಷ ವಿ.ಸಿ.ಒಡೆಯರ್​ ಹೇಳಿದರು.

ತಾಲೂಕಿನ ರಾಜಕಲ್ಲಹಳ್ಳಿಯ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಶತಮಾನೊತ್ಸವ ನೆನಪಿಗಾಗಿ, ಕುವೆಂಪು ರಂಗ ಮಂಟಪದಲ್ಲಿ ಶಾಲೆಯ ಹಾಗೂ ಸಿದ್ಧಗಂಗಾಮಠದ ಹಳೇ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಶ್ರೀಶಿವಕುಮಾರ ಸ್ವಾಮೀಜಿಗಳ 6ನೇ ಪುಣ್ಯಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶತಮಾನದ ಶ್ರೇಷ್ಠ ಸಂತರಂತಿದ್ದ ಶ್ರೀಗಳ ಕಾರ್ಯಕ್ರಮಗಳನ್ನು ಮಠದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವಿಶ್ವದಾದ್ಯಂತ ಆಚರಿಸುತ್ತಿದ್ದಾರೆ. ಮಠದ ಮಾದರಿಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ದೈವ ಭಾವನೆ, ಸಂಸ್ಕಾರ ಕಲಿಸಿದಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಉದ್ಯಮಿ ಜನಾರ್ದನ್​ ರೆಡ್ಡಿ ಮಾತನಾಡಿ, ಮಕ್ಕಳಿಗೆ ಮೊದಲನೆ ಗುರು ತಾಯಿ&ತಂದೆ ಅದರೂ ವಿದ್ಯೆ ಕಲಿಸಿದ ಗುರುಗಳೂ ಅಷ್ಟೆ ಮಹತ್ವದ ಸ್ಥಾನ ಹೊಂದಿದ್ದಾರೆ. ವಿದ್ಯೆ ಕಲಿಸಿದ ಗುರುಗಳ ಋಣ ತೀರಿಸಲು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಬಿಇಎಂಎಲ್​ ನಿವೃತ್ತ ಉದ್ಯೋಗಿ ಅಪ್ಪಯ್ಯಣ್ಣ ಮಾತನಾಡಿ, ಸಿದ್ಧಗಂಗಾ ಶ್ರೀಗಳು ಮಠದಲ್ಲಿ ಜಾತ್ಯತಿತವಾಗಿ ಎಲ್ಲ ವರ್ಗದ ಮಕ್ಕಳಿಗೆ ಅನ್ನ, ಅಕ್ಷರ, ಅಶ್ರಯ ಒದಗಿಸುವ ನಿಟ್ಟಿನಲ್ಲಿ ತ್ರಿವಿಧ ದಾಸೋಹ ನೀಡುತ್ತಿದ್ದರು. ಅದಕ್ಕಾಗಿ ಶ್ರೀಗಳು ಜೋಳಿಗೆ ಹಿಡಿದು ಭಿಕ್ಷೆ ಎತ್ತಿ ವಿದ್ಯಾರ್ಥಿಗಳನ್ನು ಪೋಷಿಸುತ್ತಿದ್ದರು. ಈ ಹಿಂದೆ ಆಹಾರದ ತೀವ್ರ ಅಭಾವ ಉಂಟಾದಾಗ ಉತ್ತರ ಕರ್ನಾಟಕದ ಕೆಲ ಬಡಜನ ಮಕ್ಕಳನ್ನು ಶ್ರೀಮಠಕ್ಕೆ ಸೇರ್ಪಡೆ ಮಾಡಿದರು. ತ್ರಿವಿಧ ದಾಸೋಹ ಪಡೆದವರು ನಮ್ಮ ಬೆಮೆಲ್​ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದ ಆಯೋಜಕರಾದ ಸುರೇಶ್​, ಮಾಜಿ ಯೋಧ ಮಂಜುನಾಥ್​, ನಿವೃತ್ತ ಶಿಕ್ಷಕ ಸತೀಶ್​, ಉದ್ಯಮಿಗಳಾದ ಮಂಜುನಾಥ್​, ಮುಖಂಡರಾದ ಸತ್ಯನಾರಾಯಣ, ನಂಜುಂಡಗೌಡ, ಮಂಜುನಾಥ್​, ಈರೇಗೌಡ, ಗೋಪಾಲಣ್ಣ, ಎ.ಶ್ರೀನಿವಾಸ್​, ವೆಂಕಟೇಶ್​, ರಾಮಣ್ಣ, ವೆಂಕಟೇಶ್​, ಶ್ರೀನಾಥ್​, ಚೌಡಪ್ಪ, ನಾರಾಯಣಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net