

ವಿದುಷಿ ಸಿ.ಎನ್.ಅನಿತಾ ಅವರ ಶಿಷ್ಯೆ ಕುಮಾರಿ ನಿಶ್ಚಿತಾ ಕೃಷ್ಣ ‘ಭರತನಾಟ್ಯ ರಂಗಪ್ರವೇಶ’ ಮಾಡಲು ಅಣಿಯಾಗಿದ್ದಾರೆ. ಜಗನ್ಮೋಹನ ಅರಮನೆಯಲ್ಲಿ ಅ.31ರಂದು ಸಂಜೆ 5.15ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಂಗ ಪ್ರವೇಶಿಸಲಿದ್ದಾರೆ.
ಈ ವೇಳೆ ನಾನಾ ನೃತ್ಯಬಂಧಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಇವರಿಗೆ ಗುರು ವಿದುಷಿ ಸಿ.ಎನ್.ಅನಿತಾ(ನಟುವಾಂಗ), ವಿದ್ವಾನ್ ಕಲಾಮಂಡಲಂ ಸಾಗರ ದಾಸ್(ಹಾಡುಗಾರಿಕೆ), ವಿದ್ವಾನ್ ಕಲಾಮಂಡಲಂ ಜಿತಿನ್ ಜೈಮೋಮನ್(ಮೃದಂಗ), ಗುರುದತ್ ಹುಣಸೂರು(ರಿದಂ ಪ್ಯಾಡ್) ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ.