ನಿವೃತ್ತಿ ಘೋಷಣೆ ಮಾಡಿದ ರಮೇಶ್ ಕುಮಾರ್ ಸ್ಪಷ್ಟಣೆ

Published on

ಜಯವಾಣಿ ಸುದ್ದಿಜಾಲ ಕೋಲಾರ
ರಾಜಕೀಯ ನಿವೃತ್ತಿಯ ಬಗ್ಗೆ ಘೋಷಣೆ ಮಾಡಿಲ್ಲ. ನಾನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಪ್ರಥಮ ಬಾರಿಗೆ ಭಾನುವಾರ ಕೋಲಾರ ಲೋಕಸಭಾ ಚುನಾವಣೆಯ ಅಭ್ಯರ್ಥಿ ಕೆ.ವಿ.ಗೌತಮ್ ಪರವಾಗಿ ಪ್ರಚಾರಕ್ಕೆಂದು ಕಾರ್ಯಕರ್ತರ ಸಭೆಯನ್ನು ಕರೆಯಲಾಗಿತ್ತು. ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡೆ, ಕಳೆದ ಬಾರಿಯ ಸೋಲಿನ ವಿಮರ್ಶೆಯನ್ನು ಕಾರ್ಯಕರ್ತರ ಬಳಿ ಹಂಚಿಕೊಳ್ಳುವ ಸಂದರ್ಭದಲ್ಲಿ ದುಃಖದಲ್ಲಿ ಕೆಲವು ಮಾತುಗಳನ್ನು ಆಡಿದ್ದೇನೆ ಹೊರತು ರಾಜಕೀಯ ನಿವೃತ್ತಿ ಬಗ್ಗೆ ಘೋಷಣೆ ಮಾಡಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಸ್ಪಷ್ಟನೆ ನೀಡಿದ್ದಾರೆ.

ರಾಜಕೀಯ ನಿವೃತ್ತಿಯ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗೆ ಸ್ಪಷ್ಟನೆ ನೀಡಿದ ಅವರು ಕಾಂಗ್ರೇಸ್ ಪಕ್ಷದ ಋಣದಲ್ಲಿ ನಾನಿದ್ದೇನೆ. ಹೈಕಮ್ಯಾಂಡ್ ಗೌತಮ್‌ರವರನ್ನು ಅಭ್ಯರ್ಥಿಯಾಗಿ ಮಾಡಿದ್ದಾರೆ. ಅವರನ್ನು ಗೆಲ್ಲಿಸಿ ಕಳುಹಿಸುವ ಕೆಲಸ ಮಾಡಬೇಕಾಗಿದೆ. ಕ್ಷೇತ್ರದಲ್ಲಿ ೪೫ ವರ್ಷಗಳಿಂದ ಕಾರ್ಯಕರ್ತರ ಸಂಪರ್ಕದಲ್ಲಿದ್ದೇನೆ. ಎಲ್ಲಾ ಕಾರ್ಯಕರ್ತರ ಮನೆಬಾಗಿಲಿಗೆ ಬರಲು ಆಗುವುದಿಲ್ಲ. ಸಮಯವೂ ಇಲ್ಲ. ಆದ ಕಾರಣ ಸಭೆಗಳನ್ನು ನಡೆಸಿ ಮತಯಾಚನೆ ಮಾಡುತ್ತೇನೆ ಎಂದು ತಿಳಿಸಿದ್ದೇನೆ.

ಶ್ರೀನಿವಾಸಪುರ ತಾಲ್ಲೂಕು ಗಡಿಭಾಗದಲ್ಲಿರುವುದರಿಂದ ಅಲ್ಲಿನ ಜನರು ಮತ್ತು ಕಾರ್ಯಕರ್ತರು ಹೆಚ್ಚು ತೆಲುಗು ಮಾತನಾಡುತ್ತಾರೆ. ತೆಲುಗು ಭಾಷೆಯಲ್ಲಿ ನನ್ನನ್ನು ಸೋಲಿಸಿದವರ ಬಗ್ಗೆ ಮಾತನಾಡಿದ್ದೇನೆ. ರಾಜಕೀಯ ನಿವೃತ್ತಿ ಬಗ್ಗೆ ಎಲ್ಲೂ ಮಾತನಾಡಿಲ್ಲ. ಅಭ್ಯರ್ಥಿ ಬಗ್ಗೆ ಪ್ರಚಾರಕ್ಕಾಗಿ ಮಾತನಾಡಿದ್ದೇನೆ. ಇದನ್ನು ಮಾಧ್ಯಮದವರು ತಪ್ಪಾಗಿ ಅಥೈಸಿಕೊಂಡು ನಿವೃತ್ತಿ ಘೋಷಣೆ ಬಗ್ಗೆ ವರದಿ ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಿದರು.

ಚಿತ್ರ ೦೨ ಕೆ.ಎಲ್.ಆರ್. ೦೩ : ರಮೇಶ್ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net