

ಪ್ರತಾಪ್ ಸಿಂಹ ಅಭಿಮಾನಿ ಬಳಗದ ವತಿಯಿಂದ ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರ ಜನುಮ ದಿನದ ಪ್ರಯುಕ್ತ ದಿವಾನ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ 75 ನಿವೃತ್ತ ಸೈನಿಕರನ್ನು ಗೌರವಿಸಲಾಯಿತು.
ಪ್ರತಾಪ್ ಸಿಂಹ ಮಾತನಾಡಿ, ಜನರು ನಿರ್ಭಯವಾಗಿ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶದ ಸೈನಿಕರು. ಯೋಧರು ಗಡಿ ಕಾಯದೆ ಹೋದರೆ ನಾವೆಲ್ಲರೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ತಿಳಿಸಿದರು.
ದೇಶದ ರಕ್ಷಣೆಯ ವಿಚಾರ ಬಂದಾಗ ಅದೆಷ್ಟು ವೀರ ಯೋಧರ ತ್ಯಾಗ ಬಲಿದಾನಗಳು ಕಣ್ಣಮುಂದೆ ಹಾದು ಹೋಗುತ್ತವೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶ, ದೇಶವಾಸಿಗಳ ರಕ್ಷಣೆಗೆ ಮಹಾತ್ಯಾಗ ಮಾಡಿದವರು ಯೋಧರು. ತಮ್ಮ ಕುಟುಂಬ ಹಾಗೂ ತಮ್ಮ ಎಲ್ಲ ವೈಯಕ್ತಿಕತೆಗಳನ್ನು ಬದಿಗಿರಿಸಿ ದೇಶದ ರಕ್ಷಣೆಗೆ ಮೊದಲ ಆದ್ಯತೆ ನೀಡಿದ್ದಾರೆ. ಹೀಗಾಗಿ ನಮ್ಮ ಹೆಮ್ಮೆಯ ಸೈನಿಕರನ್ನು ಗೌರವಿಸುವ ಕಾರ್ಯವಾಗಬೇಕೆಂದು ತಿಳಿಸಿದರು.
ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ.ಸತೀಶ್, ಗಿರೀಶ್ ಪ್ರಸಾದ್, ಬೊ.ಉಮೇಶ, ಸುಬ್ಬಯ್ಯ, ಬಿಜೆಪಿ ಮುಖಂಡರಾದ ಎಸ್.ಕೆ.ದಿನೇಶ್, ದಿನೇಶ್‌ಗೌಡ, ರಾ.ಪರಮೇಶಗೌಡ, ಚೇತನ್‌ಗೌಡ, ಗುರು ವಿನಾಯಕ್, ಬೈರಪ್ಪ, ಕೇಬಲ್ ವೆಂಕಟೇಶ್, ಪ್ರಮೋದ್, ಸುರೇಂದ್ರ, ಶ್ರವಣ್ ಮಾಲಿ, ವಿನೋದ್, ಸಂದೇಶ್, ಜಗದೀಶ್, ವಸಂತ ಮನೀಶ್, ಕಲ್ಕೆರೆ ನಾಗರಾಜ್, ಗಂಗಣ್ಣ, ಕಿರಣ್, ಚಂದ್ರಕಲಾ, ಪ್ರಕಾಶ್, ನಿಖಿಲ್, ಜಯಪ್ಪ, ಗುರುವಿನಾಯಕ್, ಮಹೇಶ್, ರಾಜೇಶ್, ಪ್ರಜ್ವಲ್, ಅಶೋಕ್, ಜಯಣ್ಣ, ಮಧು, ಚರಣ್ ಉಪಸ್ಥಿತರಿದ್ದರು.