ನಿವೃತ್ತ ತಹಸೀಲ್ದಾರ್ ಸೇರಿ ಇಬ್ಬರ ಮೇಲೆ ಎಸಿಬಿ ದಾಳಿ

acb 4
Published on

ಬೆಂಗಳೂರು:

ಅಧಿಕಾರ ದುರುಪಯೋಗಪಡಿಸಿಕೊಂಡು ಕೋಟ್ಯಂತರ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಪರಬಾರೆ ಮಾಡಿಕೊಟ್ಟ ನಿವೃತ್ತ ವಿಶೇಷ ತಹಸೀಲ್ದಾರ್ ಹಾಗೂ ವಿಷಯ ನಿರ್ವಾಹಕನಿಗೆ ಸೇರಿದ 3 ಕಡೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿ (ಎಸಿಬಿ)ಗಳು ದಾಳಿ ನಡೆಸಿದ್ದಾರೆ.

ಎಲ್ಲೆಲ್ಲಿ ದಾಳಿ ?

ಬೆಂಗಳೂರು ಉತ್ತರ (ಅಪರ), ಹಿಂದಿನ ವಿಶೇಷ ತಹಸೀಲ್ದಾರ್ (ನಿವೃತ್ತ) ಬಿ.ಆರ್.ನಾಗರಾಜ್ ಅವರು ವಿಜಯನಗರದ ಎಂ.ಸಿ.ಲೇಔಟ್‌ನಲ್ಲಿ ಹೊಂದಿರುವ ವಾಸದ ಮನೆ, ಇವರು ಈ ಹಿಂದೆ ಕರ್ತವ್ಯ ನಿರ್ವಹಿಸಿರುವ ಯಲಹಂಕ ತಹಸೀಲ್ದಾರರ ಕಚೇರಿ ಮೇಲೆ ದಾಳಿ ನಡೆಸಿ ಹಲವು ದಾಖಲೆ ಜಪ್ತಿ ಮಾಡಲಾಗಿದೆ. ಯಲಹಂಕ ತಹಸೀಲ್ದಾರ್ ಕಚೇರಿಯ ರೆರ್ಕಾಡ್ ರೂಂ ವಿಷಯ ನಿರ್ವಾಹಕ ಮಂಜುನಾಥ್ ಅಲಿಯಾಸ್ ವಾಲೇ ಮಂಜ ಅವರ ಯಲಹಂಕ ಸೋಮೇಶ್ವರನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net