ನಿರ್ವಹಣೆಯಿಂದ ಉತ್ತಮ ಇಳುವರಿ

31sri-1 krishi
ಶೃಂಗೇರಿ ತಾಲೂಕಿನ ಯಡದಾಳಿನಲ್ಲಿ ಎನ್.ಎಂ.ಸೆಹಗಲ್ ಸಂಸ್ಥೆ ಆಯೋಜಿಸಿದ್ದ ಕಾಫಿ ಕೃಷಿಯಲ್ಲಿ ಜೈವಿಕ ಉತ್ಪನ್ನಗಳ ಬಳಕೆ ಬಗ್ಗೆ ಕಾರ್ಯಾಗಾರ ನಡೆಯಿತು.ಪ್ರಶಾಂತಿ, ವಸಂತಿ, ಗಾಯತ್ರಿ, ನಟೇಶ್ ಇದ್ದರು.
Published on

ಶೃಂಗೇರಿ: ತಾಲೂಕಿನಲ್ಲಿ ಸಣ್ಣ ಮತ್ತು ಅತಿ ಸಣ್ಣ ಬೆಳೆಗಾರರು ಹೆಚ್ಚಾಗಿದ್ದು ಕಾಫಿ ಬೆಳೆಯೂ ರೈತರಿಗೆ ಮುಖ್ಯ ವಾಣಿಜ್ಯ ಬೆಳೆಯಾಗಿರುವುದರಿಂದ ಸೂಕ್ತ ನಿರ್ವಹಣೆಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಎಸ್.ಎಂ. ಸೆಹಗಲ್ ಸಂಸ್ಥೆಯ ಸುಧೀರ್ ಹೇಳಿದರು.

ಮರ್ಕಲ್ ಗ್ರಾಪಂ ವ್ಯಾಪ್ತಿಯ ಯಡದಾಳು ಗ್ರಾಮದಲ್ಲಿ ಬುಧವಾರ ಕಾಫಿ ಕೃಷಿಯಲ್ಲಿ ಜೈವಿಕ ಉತ್ಪನ್ನಗಳ ಬಳಕೆ ಬಗ್ಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಜೈವಿಕ ಉತ್ಪನ್ನಗಳನ್ನು ಬಳಸುವುದರಿಂದ ಗಿಡಗಳು ರೋಗ ನಿಯಂತ್ರಕ ಶಕ್ತಿ ಹೊಂದುವುದಲ್ಲದೆ ಇಳುವರಿ ಪ್ರಮಾಣವೂ ಹೆಚ್ಚುತ್ತದೆ ಎಂದರು.

ಸಂಸ್ಥೆಯ ಪದಾಧಿಕಾರಿ ಜಯಣ್ಣ ಮಾತನಾಡಿ, ತಾಲೂಕಿನಲ್ಲಿ ಸಂಸ್ಥೆಯಿಂದ ಕಾಫಿ ಬೆಳೆಗೆ ಪ್ರೋತ್ಸಾಹ ನೀಡುತ್ತಿದ್ದು ಈಗಾಗಲೇ ರೈತರಿಗೆ ಹಲವು ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೆ.ಎಲ್.ನಟೇಶ್, ಮಂಜುನಾಥ್, ವಸಂತಿ, ಜ್ಯೋತಿ, ಪ್ರಶಾಂತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net