ನಿಧಿ ಮುಗಿಯದ ಅಂಗೈಯಲ್ಲಿ ಬಿಡುಗಡೆ

10Kush01
ಕೂಡಿಗೆಯ ಮಾಲಾದೇವಿ ಮೂರ್ತಿ ಅವರು ಕವನ ಸಂಕಲನವನ್ನು ಬಿಡುಗಡೆ ಮಾಡಿದರು. ಕೇಶವ ಕಾಮತ್, ಟಿ.ಪಿ.ರಮೇಶ್, ಕೆ.ಎಸ್.ಮೂರ್ತಿ, ಮಾಲಾದೇವಿ, ಭಾರದ್ವಾಜ್, ಮಂಜೇಶ್ ಇತರರು ಇದ್ದರು.
Published on

ಕುಶಾಲನಗರ: ಜಿಲ್ಲೆಯಲ್ಲಿ ಸಾಹಿತ್ಯ ಪೂರಕ ಚಟುವಟಿಕೆಗಳು ನಿರಂತರವಾಗಿ ಜರುಗುತ್ತಿರುವುದು ಸಂತಸದ ವಿಚಾರ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹೇಳಿದರು.
ಕೂಡಿಗೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕಿ ಮಾಲಾದೇವಿ ಮೂರ್ತಿ ಅವರ ‘ನಿಧಿ ಮುಗಿಯದ ಅಂಗೈಯಲ್ಲಿ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ಕನ್ನಡ ಭಾಷೆಯಲ್ಲಿ ಸಾಕಷ್ಟು ಕವನ ಸಂಕಲನ, ಕಥೆ, ಕಾದಂಬರಿ ರಚನೆಯಾಗಿವೆ. ಕನ್ನಡದ ಸಾರಸ್ವತ ಲೋಕದ ಹಿರಿಮೆಯನ್ನು ಸಾಹಿತಿಗಳು ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಭಾವನೆಗಳು ತುಂಬಿದ ಕವಿತೆಗಳು ಇದರಲ್ಲಿದೆ. ಪ್ರತಿಯೊಂದು ಪ್ರಾಸಬದ್ಧ ಹಾಗೂ ಲಯಬದ್ಧವಾಗಿವೆ ಎಂದರು.
ವಸತಿ ಶಾಲೆ ಪ್ರಾಂಶುಪಾಲ ಕೆ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕಣಿವೆ ಭಾರದ್ವಾಜ್, ಲೇಖಕಿ ಮಾಲಾದೇವಿ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾನ್‌ಬೈಲು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ವಿ.ಮಂಜೇಶ್, ಜಿಲ್ಲಾ ಕಸಾಪ ಕಾರ್ಯದರ್ಶಿ ರೇವತಿ ರಮೇಶ್, ನಿರ್ದೇಶಕ ಮಂಜುನಾಥ್, ಸೋಮವಾರಪೇಟೆ ಜೆಸಿಸ್ ಅಧ್ಯಕ್ಷೆ ಎಂ.ಎ.ರುಬೀನಾ, ಕಸಾಪ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್‌ಸಾಗರ್, ಸಿಆರ್‌ಪಿ ಶಾಂತಕುಮಾರ್, ಸಾಹಿತಿ ವಹಿದ್‌ಜಾನ್, ಟಿ.ಜಿ.ಪ್ರೇಮಕುಮಾರ್, ಸದಾಶಿವ ಪಲ್ಲೇದ, ಶಿಕ್ಷಕ ಕೆ.ಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net