

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದಲ್ಲಿ ದುಷ್ಕರ್ಮಿಗಳು ದೇವಾಲಯದ ಬಾಗಿಲು ಮುರಿದು ಗೋಲಕವನ್ನು ಕದ್ದೊಯ್ದಿದ್ದಾರೆ.
ಶುಕ್ರವಾರ ತಡರಾತ್ರಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಮಹದೇವಿ ಅವರ ದೇವಾಲಯದ ಬಾಗಿಲುಗಳನ್ನು ಮುರಿದುಹಾಕಿದ ದುಷ್ಕರ್ಮಿಗಳು ಒಳಗೆ ಇದ್ದ ಗೋಲಕಗಳನ್ನು ಕದ್ದೊಯ್ದಿದ್ದಾರೆ.
ಶನಿವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು ಸ್ಥಳಕ್ಕೆ ಬೇಗೂರು ಪೊಲೀಸರು ತೆರಳಿ ಪರಿಶೀಲಿಸಿ ಸುತ್ತಲೂ ಹುಡುಕಾಡಿದಾಗ ಅನತಿ ದೂರದಲ್ಲಿ ಗೋಲಕಗಳನ್ನು ಒಡೆದು ಒಳಗೆ ಇದ್ದ ನಗನಾಣ್ಯಗಳನ್ನು ಕದ್ದೊಯ್ದಿರುವುದು ಪತ್ತೆಯಾಗಿದೆ. ಗೋಲಕಗಳಲ್ಲಿ ಸುಮಾರು 35 ಸಾವಿರ ರೂ. ಹಣ ಸಂಗ್ರಹವಾಗಿತ್ತು ಎಂದು ಸ್ಥಳೀಯರು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ಪೊಲೀಸ್ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಹುಡುಕಾಟ ನಡೆಸಿದ್ದಾರೆ.