

ಮಹಾವೀರ ಸೇವಾ ಸಂಸ್ಥಾನ್ ಮೈಸೂರು ವತಿಯಿಂದ ಭಗವಾನ್ ಶ್ರೀ ಮಹಾವೀರ ತೀರ್ಥಂಕರ ಜಯಂತಿ ಅಂಗವಾಗಿ ಗುರುವಾರ ಕಲಿಸು ಫೌಂಡೇಶನ್ ಸಂಸ್ಥಾಪಕ ಎಂ.ಎಂ.ನಿಖಿಲೇಶ್ ಅವರಿಗೆ ‘ಶ್ರೀ ಮಹಾವೀರ ಅಹಿಂಸಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ನಗರದ ಚಂದ್ರಗುಪ್ತ ರಸ್ತೆಯಲ್ಲಿರುವ ಎಂ.ಎಲ್.ವರ್ಧಮಾನಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಕನಕಗಿರಿ ಜೈನ ಮಠದ ಶ್ರೀ ಸಿದ್ದಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಪ್ರದಾನ ಮಾಡಿದರು.
ಮಾಜಿ ಶಾಸಕ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಶ್ರೀ ದಿಗಂಬರ ಜೈನ ಸಮಾಜದ ಜಿಲ್ಲಾಧ್ಯಕ್ಷ ಎಂ.ಆರ್.ಸುನೀಲ್ ಕುಮಾರ್, ಪದ್ಮಶ್ರೀ ಜೈನ ಮಹಿಳಾ ಸಮಾಜ್ ಹಂಗಾಮಿ ಜಿಲ್ಲಾಧ್ಯಕ್ಷೆ ಪದ್ಮ ಧನ್ಯಕುಮಾರ್, ಎಂ.ಎಲ್.ಬೋರ್ಡಿಂಗ್ ಹೋಂ ಸಹ ಕಾರ್ಯದರ್ಶಿ ಜಯರತ್ನ ಇದ್ದರು.