ಮಡಿಕೇರಿ: ಕೊಡವರು ಗೋಮಾಂಸ ತಿನ್ನುತ್ತಾರೆಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ನಾವು ಗೋವನ್ನು ಪೂಜಿಸುವವರು. ಬಕ್ಷಿಸುವವವರಲ್ಲ ಎಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಜಾತಿಯವರೆ ಪಕ್ಕದಲ್ಲಿ ತಿಂದಿರಬಹುದು. ಅವರನ್ನು ಕೊಡವರು ಅಂತ ಅಂದುಕೊಂಡಿರಬಹುದು ಎಂದ ಅವರು, ಸಿದ್ದರಾಮಯ್ಯ ತಿನ್ನುತ್ತಿರುತ್ತಾರೆ ಅದಕ್ಕೆ ಆ ರೀತಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.