

ಯಾದಗಿರಿ: ಮನುಷ್ಯನ ಬೆಳವಣಿಗೆಯಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಬಹುಮುಖ್ಯ ಅಂಗವಾಗಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.
ಭಾನುವಾರ ನಗರದಲ್ಲಿ ನಿಮರ್ಾಣಗೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಪ್ರತಿ ಮಗುವಿಗೂ ಪ್ರಾಥಮಿಕ ಶಿಕ್ಷಣ ತನ್ನ ಮಾತೃಭಾಷೆಯಲ್ಲೇ ಆಗಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಹೇಳಿದೆ. ಆದರೆ ಹಿಂದಿನ ಕಾಲದಲ್ಲಿದ್ದ ಗುರು ಪರಂಪರೆಯನ್ನು ನಾವು ಕಳೆದಿಕೊಳ್ಳುತ್ತಿರುವ ಪರಿಣಾಮ ಪ್ರತಿಯೊಂದು ವ್ಯವಸ್ಥೆ ಸರಿಯಿಲ್ಲ ಎಂಬ ಕೀಳರಿಮೆಯಿಂದ ಇಂದು ಬದುಕುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಾಳೆಗಳು ನಮ್ಮೊಂದಿಗಿವೆ ಎಂಬ ನಂಬಿಕೆಯಿಂದ ನಾವು ಬದುಕುವುದನ್ನು ಕಲಿಯಬೇಕಿದೆ. ಸಧ್ಯ ಎಲ್ಲೆಡೆ ಕರೊನಾ ಸೋಂಕು ಪಸರಿಸುತ್ತಿದೆ. ಆದರೆ ಯಾರೂ ಕೂಡಾ ಅದಕ್ಕೆ ಭಯಬಿದ್ದು ನಾಳೆಯನ್ನು ನೋಡುವುದಿಲ್ಲ ಅಂದುಕೊಳ್ಳುತ್ತಿಲ್ಲ. ಕ್ಷಣಿಕ ಸುಖಕ್ಕಾಗಿ ನಾಳಿನ ನೆಮ್ಮದಿಯ ಜೀವನವನ್ನು ಯಾರು ಕಳೆದುಕೊಳ್ಳಬಾರದು ಎಂದರು.
ವಿಧಾನ ಪರಿಷತ್ ಅಧ್ಯಕ್ಷ ಶಶೀಲ್ ಜಿ.ನಮೋಶಿ, ಶಾಸಕ ವೆಂಕಟರಡ್ಡಿ ಮುದ್ನಾಳ್ , ಡಾ.ಸುಭಾಶ್ಚಂದ್ರ ಕೌಲಗಿ, ಮಾಜಿ ಎಂಎಲ್ಸಿ ಚೆನ್ನಾರಡ್ಡಿ ಪಾಟೀಲ್ ತುನ್ನೂರ, ಜಿಪಂ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ, ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನಾವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್, ತಾಪಂ ಅಧ್ಯಕ್ಷೆ ಭೀಮವ್ವ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್, ಯುಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ಕಸಾಪ ತಾಲೂಕಾಧ್ಯಕ್ಷರಾದ ಡಾ.ಭೀಮರಾಯ ಲಿಂಗೇರಿ, ಶ್ರೀನಿವಾಸ ಜಾಲವಾದಿ, ನಾಗಣ್ಣ ಅಡಿಕ್ಯಾಳ, ಬಸರಡ್ಡಿ ಎಂ.ಟಿ.ಪಲ್ಲಿ, ಸಿದ್ದಲಿಂಗಣ್ಣ ಆನೆಗುಂದಿ ಇದ್ದರು. ಡಾ.ಎಸ್.ಎಸ್.ನಾಯಕ ಸ್ವಾಗತಿಸಿದರು. ಡಾ.ಗಾಳೆಪ್ಪ ಪೂಜಾರಿ ವಂದಿಸಿದರು.