ನಾಲ್ವಡಿ ಕೃಷ್ಣರಾಜ ಒಡೆಯರ್ ವರ್ಣಚಿತ್ರದ ಮೆರವಣಿಗೆ

22
Published on

ಅರಸು ಮಂಡಳಿ ಸಂಘದ ಆವರಣದಲ್ಲಿ ಬುಧವಾರ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಜಯಂತಿ ನೆರವೇರಿತು.

ಜಯಂತಿ ಅಂಗವಾಗಿ ಅರಸು ಜನಾಂಗದ ಪ್ರತಿಭಾನ್ವಿತರನ್ನು ಅಭಿನಂದಿಸಲಾಯಿತು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ, ಯು.ಜಿ. ಗೋಪಾಲ್ ರಾಜೇ ಅರಸ್, ಸಂಘದ ಅಧ್ಯಕ್ಷ ಕೆ. ಮನೋಜ್ ರಾಜ್ ಅರಸ್, ಪದಾಧಿಕಾರಿಗಳಾದ ಶ್ರೀಕಾಂತ್ ಅರಸ್, ಸುಚಿತ್ರಾ, ಗೋಪಿ ಅರಸ್ ಇತರರು ಭಾಗವಹಿಸಿದ್ದರು. ಜಯಂತಿ ಅಂಗವಾಗಿ ನಾಲ್ವಡಿ ಅವರ ವರ್ಣಚಿತ್ರದ ಮೆರವಣಿಗೆಯು ಅಗ್ರಹಾರದ ಸಂಘದ ಆವರಣದಿಂದ ಕೆ.ಆರ್.ವೃತ್ತದವರೆಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net